ಚಾಮರಾಜನಗರ, ಜೂನ್, 02: ದೇಶದ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ವ್ಯಾಪ್ತಿಯಲ್ಲಿ ಆಗಾಗ ಪ್ರಾಣಿಗಳ ಚಲನವಲನಗಳ ದೃಶ್ಯಗಳನ್ನು ಪ್ರವಾಸಿಗರು ಕ್ಯಾಮೆರಾದಲ್ಲಿ ಸೆರೆಹಿಡುತ್ತಲೇ ಇರುತ್ತಾರೆ. ಹಾಗೆಯೇ ಇದೀಗ ಮತ್ತೆ ಬಂಡೀಪುರದಲ್ಲಿ ಅಪರೂಪದ ಕ್ಷಣವನ್ನು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.
ಬಂಡೀಪುರ ಸಫಾರಿ ಜೋನ್ನಲ್ಲಿ ಪ್ರವಾಸಿಗರಿಗೆ ತಾಯಿ ಹುಲಿ ಜೊತೆ ಮೂರು ಹುಲಿ ಮರಿ ಕಾಣಿಸಿಕೊಂಡಿದ್ದವು. ಈಗ ಸಫಾರಿ ಜೋನ್ನಲ್ಲಿ ಆನೆಯೊಂದು ಮರಿಗೆ ಜನ್ಮನೀಡಿರುವ ಘಟನೆ ನಡೆದಿದ್ದು, ಪ್ರವಾಸಿಗರು ಗಜ ಪ್ರಸವ ಕಂಡು ಸಂತಸದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ಬಂಡೀಪುರದ ಸಫಾರಿ ಝೋನಿನ ಸಫಾರಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಪ್ರವಾಸಿಗರ ಸಫಾರಿ ವಾಹನ ನಿಂತು ನೋಡುತ್ತಿದ್ದ ವೇಳೆ ಕಾಡಾನೆಯೊಂದು ಒಂದು ಸುತ್ತು ಹಾಕಿ ಮರಿಗೆ ಜನ್ಮ ಕೊಟ್ಟಿದೆ. ಇನ್ನು ಈ ಘಟನೆ ಶುಕ್ರವಾರದ ಸಫಾರಿಯಲ್ಲಿ ನಡೆದಿದ್ದು, ಇದು ತಡವಾಗಿ ಬೆಳಕಿಗೆ ಬಂದಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.