BREAKING: ನಮ್ಮ ಮೆಟ್ರೋ ಸೇವೆಯಲ್ಲಿ ಇಂದು ಸಂಚಾರ ವ್ಯತ್ಯಯ: ಗಮನಿಸಿ

Arun Kumar
0

ಬೆಂಗಳೂರು, ಜೂನ್ 02: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಜೋರು ಮಳೆ ದಾಖಲಾಗಿದೆ. ಇದರಿಂದ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನಿರ್ವಹಿಸುವ ನಮ್ಮ ಮೆಟ್ರೋ ರೈಲಿನ ಸಂಚಾರಕ್ಕೆ ತೊಂದರೆ ಆಗಿದೆ. ವೈಟ್ಫಿಲ್ಡ್ ಮತ್ತು ಚಲಘಟ್ಟವರೆಗಿನ ಮೆಟ್ರೋ ಸಂಚಾರ ಅಸ್ತವೆಸ್ತಗೊಂಡಿದೆ.

ಹೌದು, ಚಲಘಟ್ಟ-ವೈಟ್ಫಿಲ್ಡ್ ವರೆಗೆ ಇರುವ ಮೆಟ್ರೋ ನೇರಳೆ ಮಾರ್ಗ ಮಧ್ಯೆ ಸೋಮವಾರ ಸಂಜೆ ಬಂದ ಜೋರು ಗಾಳಿ ಸಹಿತ ಮಳೆಗೆ ಮರದ ಕೊಂಬೆಯೊಂದು ಹಳಿಗೆ ಅಡ್ಡಲಾಗಿ ಬಿದ್ದಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೋಮವಾರ ಇಂದು ಸಂಜೆ 19.26 ಗಂಟೆಗೆ ಭಾರೀ ಮಳೆಯಿಂದಾಗಿ ಮರದ ಕೊಂಬೆಗಳು ಎಂಜಿ ರಸ್ತೆ ಮತ್ತು ಟ್ರಿನಿಟಿ ನಿಲ್ದಾಣಗಳ ನಡುವಿನ ವಯಡಕ್ಟ್ ಟ್ರ್ಯಾಕ್ನಲ್ಲಿ ಬಿದ್ದಿವೆ. ಈ ಕಾರಣದಿಂದ ಎಂಜಿ ರಸ್ತೆ ಮತ್ತು ಇಂದಿರಾನಗರ ನಡುವೆ ರೈಲು ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ

ಆದಾಗ್ಯೂ ನೇರಳೆ ಮಾರ್ಗದ ಇಂದಿರಾನಗರ ಮತ್ತು ವೈಟ್ಫೀಲ್ಡ್ ಹಾಗೂ ಚಲ್ಲಘಟ್ಟ ಮತ್ತು ಎಂ ಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಶಾರ್ಟ್ ಲೂಪ್ಗಳು ಚಾಲನೆಯಲ್ಲಿವೆ. ಸದ್ಯ ಮಳೆಗಾಳಿಯಿಂದ ಉಂಟಾದ ಅನನುಕೂಲತೆಯನ್ನು ವಿಷಾದಿಸಲಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕಿದೆ ಎಂದು ನಮ್ಮ ಮೆಟ್ರೋದ ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿಶ್ರೀವಾಸ್ ರಾಜಗೋಪಾಲನ್ ಮಾಹಿತಿ ನೀಡಿದ್ದಾರೆ.

ಎಂಜಿ ರಸ್ತೆ-ಇಂದಿರಾ ನಗರದವರೆಗೆ ಸಂಚಾರ ಕಟ್
ಟ್ರಿನಿಟಿ ನಿಲ್ದಾಣದ ದಿಂದ ಎಂಜಿ ರಸ್ತೆಗೆ ಹೋಗುವ ಕಡೆಗೆ ಮೆಟ್ರೋ ಹಳಿಗಳ ಮೇಲೆ ಮರದ ಕೊಂಬೆ ಬಿದ್ದಿದೆ. ಹೀಗಾಗಿ ಇಂದಿರಾನಗರದಿಂದ ವೈಟ್ಫೀಲ್ಡ್ ವರೆಗೆ ಮತ್ತು ಎಂಜಿ ರಸ್ತೆಯಿಂದ ಚಲ್ಲಘಟ್ಟದ ನಡುವೆ ಮಾತ್ರ ರೈಲುಗಳು ರಾತ್ರಿ 7.26 ರಿಂದ ಕಾರ್ಯ ನಿರ್ವಹಿಸುತ್ತಿವೆ. ಈ ಮರೆದ ಕೊಂಬೆ ತೆರವಿನ ಬಳಿಕ ಎಂದಿನಂತೆ ಮೆಟ್ರೋ ಕಾರ್ಯಾಚರಣೆ ನಡೆಯುತ್ತದೆ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಸೋಮವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಜೋರು ಮಳೆಗೆ ನಗರ ರಸ್ತೆಗಳು, ಅಂಡರ್ಪಾಸ್ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿತ್ತು. ಮರದ ಕೊಂಬೆ ಬಿದ್ದು ಕೆಲವೆಡೆ ತೊಂದರೆ ಆಗಿದೆ. ಅದೇ ರೀತಿ ಮೊದಲ ಬಾರಿಗೆ ಮೆಟ್ರೋ ಹಳಿ ಮೇಲೆ ಮರದ ಕೊಂಬೆ ಬಿದ್ದು, ಮೆಟ್ರೋ ಸಂಚಾರಕ್ಕೆ ಅಡ್ಡಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)