ಮೋದಿಗೆ ನ್ಯೂ ಟೆನ್ಷನ್‌: ಯಾವ ಯಾವ ಪಕ್ಷಕ್ಕೆ ಎಷ್ಟೆಷ್ಟು ಸಚಿವ ಸ್ಥಾನ? ನಾವು ಕೇಳಿದಷ್ಟು ನೀಡಿ, ಇಲ್ಲಾ ಅಂದ್ರೆ...

Arun Kumar
0

18ನೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಈ ಚುನಾವಣೆಯಲ್ಲಿ ಮೈತ್ರಿ ಕೂಟಕ್ಕೆ ಮತದಾರ ಜೈ ಎಂದಿದ್ದಾನೆ. ಆದರೆ ಬಿಜೆಪಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಎಂಬ ಹಣೆ ಪಟ್ಟಿಯನ್ನು ಹೊಂದಿದೆ. ಆದರೂ ಸಹ ಸರ್ಕಾರ ರಚನೆಯ ಕಾರ್ಯ ಸುಲಲಿತವಾಗಿ ಆಗುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ನರೇಂದ್ರ ಮೋದಿ ಅವರಿಗೆ ಹೊಸ ಟೆನ್ಷನ್ ಆರಂಭವಾಗಿದೆ.

ತಾನು ಅಂದುಕೊಂಡಿಕ್ಕಿಂತ ಸ್ಥಾನಗಳು ಲಭಿಸಿದ್ದರಿಂದ ಬಿಜೆಪಿ ಪಾಳಯದಲ್ಲಿ ಕೊಂಚ ನಿರಾಸೆ ಕಂಡಿದೆ. ಎಲ್ಲವೂ ತಾನು ಅಂದುಕೊಂಡಂತೆ ಆಗುತ್ತದೆ ಎಂದು ತಿಳಿದಿದ್ದ ಬಿಜೆಪಿ ಹೈಕಮಾಂಡ್ಗೆ ಮುಖಭಂಗವಾಗಿದೆ. ಈಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ರಚಿಸುವ ಇಕ್ಕಟ್ಟಿನ ಪರಿಸ್ಥಿತಿಗೆ ಬಿಜೆಪಿ ಬಂದು ನಿಂತಿದೆ.

2014 ಮತ್ತು 2019ರಲ್ಲಿ ಇದ್ದ ಚಿತ್ರಣ ಈಗ ಕಾಣಲು ಸಾಧ್ಯವೇ ಇಲ್ಲ. ನರೇಂದ್ರ ಮೋದಿ ಸಹ ಬೇರೆಯವರ ಮಾತುಗಳನ್ನು ಆಲಿಸಿಕೊಳ್ಳಬೇಕು. ತನಗೆ ಬೇಕಾದ ಹಾಗೆ ಸರ್ಕಾರವನ್ನು ನಡೆಸಲು ಆಗದು. ಇವುಗಳೆನಲ್ಲಾ ಅರಿತು ಮೋದಿ ಬುಧವಾರ ಸಂಜೆ 4 ಗಂಟೆಗೆ ಪ್ರಧಾನಿ ನಿವಾಸದಲ್ಲಿ ಎನ್ಡಿಎ ಮೊದಲ ಸಭೆ ಕರೆದಿದ್ದಾರೆ. ಒಂದು ಗಂಟೆ ಕಾಲ ನಡೆದ ಸಭೆಯಲ್ಲಿ ಮೋದಿ ಅವರನ್ನು ಎನ್ಡಿಎ ನಾಯಕರನ್ನಾಗಿ ಎಲ್ಲ ಪಕ್ಷದ ಮುಖಂಡರು ಸರ್ವಾನು ಮತದಿಂದ ಆಯ್ಕೆ ಮಾಡಿದ್ದಾರೆ.

16 ಪಕ್ಷಗಳ 21 ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಮೂಲಗಳ ಪ್ರಕಾರ ಜೂನ್ 7 ರಂದು ಎನ್ ಡಿಎ ಸಂಸದರು ಸಭೆ ನಡೆಸಲಿದ್ದಾರೆ. ಇದರ ನಂತರ, ಸಂಜೆ 5 ರಿಂದ 7 ರ ನಡುವೆ, ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ರಾಷ್ಟ್ರಪತಿಗಳ ಬಳಿಗೆ ಹೋಗುತ್ತಾರೆ.

ರಾಜನಾಥ್ ಸಿಂಗ್, ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರಿಗೆ ಎಲ್ಲಾ ಮಿತ್ರಪಕ್ಷಗಳೊಂದಿಗೆ ಒಂದಕ್ಕೊಂದು ಮಾತನಾಡುವ ಮತ್ತು ಹೊಸ ಸರ್ಕಾರದ ಸ್ವರೂಪದ ಬಗ್ಗೆ ಚರ್ಚಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಏತನ್ಮಧ್ಯೆ, ಪ್ರಧಾನಿ ಮೋದಿ ರಾಜೀನಾಮೆ ಮತ್ತು ಸಚಿವ ಸಂಪುಟವನ್ನು ವಿಸರ್ಜಿಸಲು ಶಿಫಾರಸು ಮಾಡಿದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಲೋಕಸಭೆಯನ್ನು ವಿಸರ್ಜಿಸಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನ ಗಳಿಸಿದೆ. ಇನ್ನು ಬಿಜೆಪಿಗೆ ಬಹುಮತಕ್ಕೆ (272) 32 ಸ್ಥಾನಗಳು ಕಡಿಮೆ. ಆದರೆ, ಎನ್ಡಿಎ 292 ಸ್ಥಾನಗಳೊಂದಿಗೆ ಬಹುಮತದ ಗಡಿ ದಾಟಿದೆ.

ಚಂದ್ರಬಾಬು ಅವರ ಟಿಡಿಪಿ 16 ಸ್ಥಾನಗಳೊಂದಿಗೆ ಮೈತ್ರಿಕೂಟದಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿದ್ದು, ನಿತೀಶ್ ಅವರ ಜೆಡಿಯು 12 ಸ್ಥಾನಗಳೊಂದಿಗೆ ಮೂರನೇ ಅತಿದೊಡ್ಡ ಪಕ್ಷವಾಗಿದೆ. ಈ ಸಮಯದಲ್ಲಿ ಬಿಜೆಪಿಗೆ ಎರಡೂ ಪಕ್ಷಗಳು ಅವಶ್ಯಕ. ಅವರಿಲ್ಲದೆ ಬಿಜೆಪಿಗೆ ಸರ್ಕಾರ ರಚನೆ ಕಷ್ಟ.

ಮೂಲಗಳ ಪ್ರಕಾರ, ಟಿಡಿಪಿ 6 ಸಚಿವಾಲಯಗಳೊಂದಿಗೆ ಸ್ಪೀಕರ್ ಹುದ್ದೆಗೆ ಬೇಡಿಕೆ ಇಟ್ಟಿದೆ. ಇದೇ ಸಮಯದಲ್ಲಿ, ಜೆಡಿಯು 3 ಸಚಿವಾಲಯಗಳಿಗೆ ಬೇಡಿಕೆ ಇಟ್ಟಿದೆ, ಚಿರಾಗ್ 2 (ಒಂದು ಕ್ಯಾಬಿನೆಟ್, ಒಂದು ಸ್ವತಂತ್ರ ಉಸ್ತುವಾರಿ), ಮಾಂಝಿ ಒಂದು, ಶಿಂಧೆ 2 (ಒಂದು ಕ್ಯಾಬಿನೆಟ್, ಒಂದು ಸ್ವತಂತ್ರ ಉಸ್ತುವಾರಿ) ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದಾರೆ. ಇದೇ ವೇಳೆ ಚುನಾವಣೆಗೂ ಮುನ್ನ ನಮಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು ಎಂದು ಜಯಂತ್ ಹೇಳಿದ್ದಾರೆ. ಅದೇ ರೀತಿ ಅನುಪ್ರಿಯಾ ಪಟೇಲ್ ಕೂಡ ಸಚಿವ ಸ್ಥಾನ ಬಯಸಿದ್ದಾರೆ ಎಂದು ತಿಳಿದು ಬಂದಿದೆ.

ಮೋದಿ ಈಗ ಈ ಎಲ್ಲ ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸುವ ಅನಿವಾರ್ಯತೆ ಇದೆ. ಒಂದು ವೇಳೆ ಪಕ್ಷಗಳು ತಾವು ಬಯಸಿದ್ದ ಸಚಿವ ಸ್ಥಾನ ನೀಡದೇ ಇದ್ದಲ್ಲಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)