T20 World Cup: ರಿಂಕು ಬಿಟ್ಟಿದ್ದೇಕೆ? ಹಾರ್ದಿಕ್‌ ಆಯ್ಕೆ ಮಾಡಿದ್ದೇಕೆ? ಈ ಪ್ರಶ್ನೆಗಳಿಗೆ ರೋಹಿತ್‌, ಅಜಿತ್‌ ನೀಡಿದ ಉತ್ತರವೇನು?

Arun Kumar
0

ಟಿ20 ವಿಶ್ವಕಪ್ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದ ಆಯ್ಕೆಯ ಬಗ್ಗೆ ಹಲವು ಪ್ರಶ್ನೆಗಳು ಸಹಜವಾಗಿವೆ ಇದ್ದವು. ಇದಕ್ಕೆ ಉತ್ತರ ನೀಡಲೆಂದೇ ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಹಾಗೂ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾಧ್ಯಮ ಗೋಷ್ಠಿ ನಡೆಸಿದರು.

ಟೀಮ್ ಇಂಡಿಯಾ ಆಯ್ಕೆ ವಿಚಾರದಲ್ಲಿ ಅನುಸರಿಸದ ಮಾನದಂಡಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರು ಎಸೆದ ಬೌನ್ಸರ್ಗೆ ಟೀಮ್ ಇಂಡಿಯಾ ನಾಯಕ ಡಿಫೆನ್ಸಿವ್ ಮೂಡ್ನಲ್ಲಿ ಉತ್ತರ ನೀಡಿದ್ದಾರೆ. ರಿಂಕು ಸಿಂಗ್, ಕೆ.ಎಲ್ ರಾಹುಲ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದು ಏಕೆ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರಿಗೆ ಮತ್ತೆ ಉಪನಾಯಕತ್ವ ಏಕೆ?
ನಿಜಕ್ಕೂ ಹಾರ್ದಿಕ್ ಪಾಂಡ್ಯ ಅವರಿಗೆ ಉಪನಾಯಕತ್ವ ನೀಡಿರುವ ವಿಚಾರ ಭಾರೀ ಸದ್ದು ಮಾಡುತ್ತಲೇ ಇತ್ತು. ಇದಕ್ಕೆ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಉತ್ತರಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಗಾಯದ ಕಾರಣ ದೀರ್ಘ ವಿರಾಮದಿಂದ ಮೈದಾನಕ್ಕೆ ಮರಳಿದ್ದಾರೆ.

ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವಾಗ ಎಲ್ಲಾ ಪಂದ್ಯಗಳಲ್ಲಿ ತುಂಬಾ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ. ಬೇರೆ ಯಾವುದೇ ಆಟಗಾರ ಅವರೊಂದಿಗೆ ಫಿಟ್ನೆಸ್ ವಿಚಾರದಲ್ಲಿ ಸ್ಪರ್ಧಿಸಬಹುದು ಎಂದು ನಾನು ಭಾವಿಸಲಾರೆ. ಅವರು ನಿರ್ವಹಿಸಬಹುದಾದ ಪಾತ್ರಗಳಿಗೆ ಅವರು ಫಿಟ್ ಆಗಿ ಉಳಿಯುವುದು ಮುಖ್ಯವಾಗಿದೆ. ಅವರು ಫಿಟ್ ಆಗಿರುವವರೆಗೆ ಮತ್ತು ತಂಡದ ಪರ ಆಡುತ್ತಾರೆ. ಹಾರ್ದಿಕ್ ಪಾಂಡ್ಯ ತಂಡದಲ್ಲಿ ಯಾವಾಗಲೂ ಇರಬೇಕೆಂದು ನಾವು ಬಯಸುತ್ತೇವೆ, ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ.
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)