ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾಯಿತ ಕ್ಷೇತ್ರ ವಾರಾಣಾಸಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಸತತ ಮೂರನೇ ಬಾರಿಗೆ ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ನಾಮ ಪತ್ರ ಸಲ್ಲಿಸಲಿರುವ ಮೋದಿ, ಸುಮಾರು ಆರು ಕಿಲೋಮಿಟರ್ ಉದ್ದರ ರೋಡ್ ಶೋ ನಡೆಸಿದರು.
ಮೋದಿ ತವರು ಗುಜರಾತ್ ಆದರೆ, ಅವರ ರಾಜಕೀಯ ಎರಡನೇ ತವರು ವಾರಣಾಸಿ. ಬಾಬಾ ಭೋಲೆನಾಥ್ನ ಸನ್ನಿಧಿಯಿಂದಲೇ ಮೋದಿ ಸಂಸತ್ ವರೆಗೂ ಪ್ರವೇಶಿಸಿದ್ದಾರೆ. ಹೀಗಾಗಿ ಮೋದಿ ಇದೇ ಕ್ಷೇತ್ರವನ್ನು ತಮ್ಮ ಕರ್ಮ ಭೂಮಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಮಂಗಳವಾರ ಮೋದಿ ಬಿಜೆಪಿ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನದಿನವಾದ ಸೋಮವಾರ ನಡೆದ ಭರ್ಜರಿ ರೋಡ್ ಶೋನಲ್ಲಿ ಮೋದಿ ರಾರಾಜಿಸಿದರು.
ಶೃಂಗಾರ ಗೊಂಡಿರುವ ವಾರಣಾಸಿ
ವಾರಣಾಸಿ ಅಂದರೆ ಕೇಳಬೇಕೆ, ಭಕ್ತಿ ಭಾವದ ಬೀಡು.. ಈ ಪ್ರದೇಶದಲ್ಲಿ ಭಾನುವಾರದಿಂದಲೇ ಕೇಸರಿ ಬಣ್ಣ ನಗರವನ್ನು ಆವರಿಸಿಕೊಂಡಿತ್ತು. ಕತ್ತು ಎತ್ತಿ ನೋಡಿದಲೆಲ್ಲಾ ಕೇಸರಿ ಮಯ. ಬಿಜೆಪಿ ಬಾವುಟಗಳು, ಮೋದಿ ಭಾವಚಿತ್ರಗಳು, ನಗರದ ಹಲವೆಡೆ ರಾರಾಜಿಸುತ್ತಿದ್ದವು. ಎಲ್ಲಿ ನೋಡಿದರೂ ಕೇಸರಿ ವಾರಣಾಸಿಯನ್ನು ಆವರಿಸಿಕೊಂಡಿತ್ತು. ಅಕ್ಷರಶಃ ವಾರಣಾಸಿ ನವ ವಧುವಣ ಗಿತ್ತಿಯಂತೆ ಶೃಂಗಾರಗೊಂಡಿತ್ತು.
ಮೋದಿಯವರ ರೋಡ್ಶೋ ವೇಳೆ ನೆರೆದಿದ್ದ ಜನರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಅಸ್ಸಿ ಮಾರ್ಗದಲ್ಲಿ ಮೋದಿಯನ್ನು ಸ್ವಾಗತಿಸಲು ಜನರು ವೇದಿಕೆಗೆ ಬಂದು ಬ್ಯಾರಿಕೇಡ್ಗಳನ್ನು ಮುರಿದರು. ಇದಾದ ಬಳಿಕ ರವಿದಾಸ್ ಗೇಟ್ ಬಳಿ ಜನರನ್ನು ವಾಪಸ್ ಕಳುಹಿಸಲಾಯಿತು. ಮೋದಿಯವರ ರಥದ ಮುಂದೆ ಮಹಿಳೆಯರ ಬೆಂಗಾವಲು ಪಡೆ ಸಾಗುತ್ತಿತ್ತು. ಎಲ್ಲರೂ ಕೇಸರಿ ಬಣ್ಣದ ಸೀರೆ ಉಟ್ಟಿದ್ದರು. ಈ ಅವಧಿಯಲ್ಲಿ ಮೋದಿ ಮತ್ತು ಸಿಎಂ ಯೋಗಿ ಜನರತ್ತ ಕೈ ಬೀಸುತ್ತಲೇ ಸಾಗಿದರು.
ಕಲಾ ತಂಡಗಳ ಪ್ರದರ್ಶನ
ಮೋದಿಯವರ ರೋಡ್ಶೋ ಸಂದರ್ಭದಲ್ಲಿ ವಿವಿಧ ಕಲಾ ತಂಡಗಳು ಪ್ರದರ್ಶನ ನೀಡಿದವು. ಇದಲ್ಲದೇ ವೇದಘೋಷದೊಂದಿಗೆ ಮೋದಿಯವರನ್ನು ಸ್ವಾಗತಿಸಲಾಯಿತು.ಈ ವೇಳೆ ಕಲಾವಿದರು ಭಗವಾನ್ ಶಂಕರನ ವೇಷದಲ್ಲಿಯೂ ಕಾಣಿಸಿಕೊಂಡರು. ಮೋದಿಯವರ ಐದು ಕಿಲೋಮೀಟರ್ ಉದ್ದದ ರೋಡ್ ಶೋ ಕಾಶಿ ವಿಶ್ವನಾಥ ಧಾಮದ ಗೇಟ್ ನಂ.4 ರ ವರೆಗೂ ನಡೆಯಿತು.
ರೋಡ್ಶೋದಲ್ಲಿ ಪ್ರಧಾನಿ ಮೋದಿ ಅವರನ್ನು ಕಣ್ಣು ತುಂಬಿಕೊಳ್ಳಲು ಜನರು ಕಾತುರರಾಗಿದ್ದಾರೆ. ಮನೆಗಳ ಮೇಲ್ಛಾವಣಿ ಮತ್ತು ಜಗುಲಿಗಳಿಂದ, ಮಹಿಳೆಯರು, ಮಕ್ಕಳು ಮತ್ತು ಕೆಲವು ಸ್ಥಳಗಳಲ್ಲಿ ವೃದ್ಧರೂ ಸಹ ಮೋದಿಯ ದರ್ಶನ ಪಡೆಯಲು ಕಾದು ಕುಳಿತಿದ್ದರು. ಯುವಕರು ಎಲ್ಲೇ ಇದ್ದರೂ ಪ್ರಧಾನಿ ಮೋದಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ರೋಡ್ ಶೋ ಅನ್ನು ಫೇಸ್ಬುಕ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲೈವ್ ಮಾಡಲಾಗುತ್ತಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.