ಭಾರತದ ವಿರುದ್ಧ ಗುಡುಗಿದ ಅಮೆರಿಕ? ಮತ್ತೆ ತನ್ನ ಬುದ್ಧಿ ತೋರಿಸ್ತಾ?

Arun Kumar
0

ಭಾರತದ ವಿರುದ್ಧ ಅಮೆರಿಕ ಮತ್ತೊಮ್ಮೆ ಕಿರಿಕ್ ಶುರು ಮಾಡಿದೆ. ಸಮಯ ಸಿಕ್ಕರೆ ಸಾಕೆಂದು ಕಾಯುತ್ತಾ ಕೂರುವ ಅಮೆರಿಕ ಪದೇ ಪದೇ ಭಾರತದ ವಿರುದ್ಧ ಕುತಂತ್ರ ಮಾಡುತ್ತದೆ ಎಂಬ ಆರೋಪಗಳು ಕೇಳಿಬರುತ್ತವೆ. ಇದಕ್ಕೆ ಪುಷ್ಠಿ ನೀಡುವಂತೆ ಈಗ ಸಣ್ಣ ಮ್ಯಾಟರ್ಗೆ ಭಾರತದ ವಿರುದ್ಧ ಮತ್ತೊಮ್ಮೆ ಕೆಂಡಕಾರಿದೆ 'ದೊಡ್ಡಣ್ಣ' ಎಂದು ಬಿಲ್ಡಪ್ ಕೊಡುವ ಅಮೆರಿಕ.

ಹೌದು, ಅಮೆರಿಕ ಅಂದ್ರೆನೆ ಹಿಂಗೆ ತಾನೂ ಉದ್ಧಾರ ಆಗಲ್ಲ ಬೇರೆ ದೇಶಗಳು ಉದ್ಧಾರ ಆಗುವ ಶುಭ ಸುದ್ದಿ ಕೇಳಿದರೆ ಅದನ್ನೂ ಸಹಿಸುವುದಿಲ್ಲ. ಹಿಂಗೆ, ಅಮೆರಿಕ ಪದೇ ಪದೇ ಜಾಗತಿಕ ಆರ್ಥಕತೆ ಮೇಲೆ ತನ್ನ ಹಿಡಿತ ಸಾಧಿಸಲು ಪ್ರಯತ್ನ ಮಾಡುತ್ತಲೇ ಇರುತ್ತದೆ. ಆದರೆ ಇದು ಎಲ್ಲಾ ಕಡೆಯೂ ಫ್ಲಾಪ್ ಆಗಿದ್ದು, ಈಗ ಭಾರತ ಮತ್ತು ಇರಾನ್ ಒಪ್ಪಂದದ ಮೇಲೆ ಕೂಡ ಅಮೆರಿಕ ಕಣ್ಣಿಟ್ಟಿದೆ. ಇಷ್ಟೇ ಅಲ್ಲದೆ ಈ ಕುರಿತು ಭಾರತಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ಅಮೆರಿಕ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಹಾಗಾದ್ರೆ ಅಮೆರಿಕ ಕಿರಿಕ್ ತೆಗೆದಿದ್ದು ಯಾಕೆ..? ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಭಾರತ & ಇರಾನ್ ದೋಸ್ತಿಗೆ ಕಿಡಿ?
ಅಂದಹಾಗೆ ಭಾರತ & ಇರಾನ್ ನಡುವೆ ಮಹತ್ವದ ಒಪ್ಪಂದ ನಡೆದಿದೆ. ಇರಾನ್ ದೇಶದಲ್ಲಿ ಹಿಡಿತ ಹೊಂದಿದರೆ ಅದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ದೊಡ್ಡ ಉಪಯೋಗ ಇದೆ ಅನ್ನೋ ಲೆಕ್ಕಾಚಾರ ಇತ್ತು. ಹೀಗಾಗಿ ಇರಾನ್ ಆಗ್ನೇಯ ಕರಾವಳಿ ಪ್ರದೇಶದ ಚಬಹಾರ್ ಬಂದರು ನಿರ್ವಹಿಸಲು ಭಾರತ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿತ್ತು.

ಹೀಗೆ ಸಹಿ ಹಾಕಿದ ತಕ್ಷಣ ಅಮೆರಿಕ ರೊಚ್ಚಿಗೆದ್ದಿದೆ. ಭಾರತದ ಹೆಸರು ಪ್ರಸ್ತಾಪ ಮಾಡದೆ, ಇರಾನ್ನ ಜೊತೆಗೆ ವ್ಯಾಪಾರ ಒಪ್ಪಂದ ಮುಂದುವರಿಸಿದರೆ ಆ ದೇಶಕ್ಕೆ ಸಂಭಾವ್ಯ ನಿರ್ಬಂಧಗಳ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಅರ್ಥಾತ್ ಸೋ ಕಾಲ್ಡ್ 'ದೊಡ್ಡಣ್ಣ' ಅಮೆರಿಕ ಎಚ್ಚರಿಕೆ ಸಂದೇಶ ರವಾನಿಸಿದೆ. ಆದರೆ ಇದರಿಂದಾಗಿ ಅಮೆರಿಕಗೆ ದೊಡ್ಡ ನಷ್ಟ, ಭಾರತಕ್ಕೆ ಅಲ್ಲ ಅಂತಿದ್ದಾರೆ ತಜ್ಞರು.

ಭಾರತಕ್ಕೆ ಭರ್ಜರಿ ಬಂಪರ್!
ಭಾರತ ಮತ್ತು ಇರಾನ್ ಬಂದರು ಒಪ್ಪಂದ ಅದೆಷ್ಟು ಉಪಯೋಗಕಾರಿ ಅಂತಾ ಹೇಳಿದರೆ, ಇದರಿಂದ ಇರಾನ್ ಜೊತೆಗೆ ಮಾತ್ರವಲ್ಲ ಆಫ್ಘಾನಿಸ್ತಾನದ ಜೊತೆಗೂ ಬಾಂಧವ್ಯ ವೃದ್ಧಿಗಾಗಿ ಸಹಕಾರಿ ಆಗುತ್ತಿದೆ. ಚಬಹಾರ್ ಬಂದರು ಮೂಲಕ ಭಾರತವು ಈವರೆಗೂ 2.5 ಮಿಲಿಯನ್ ಟನ್ ಗೋಧಿ ಸೇರಿದಂತೆ 2,000 ಟನ್ ಬೇಳೆಕಾಳುಗಳನ್ನು ಆಫ್ಘಾನಿಸ್ತಾನಕ್ಕೆ ರವಾನಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)