2050 ರ 10 ದೊಡ್ಡ ನಗರಗಳು: ಪಟ್ಟಿಯಲ್ಲಿ ಭಾರತದ ಎರಡು ನಗರಗಳಿಗೆ ಅಗ್ರ ಪಟ್ಟ

Arun Kumar
0

ವಿಶ್ವದಲ್ಲಿ ಜನಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದು ಹಲವು ದೇಶಗಳ ನಿದ್ದೆಯನ್ನು ಕೆಡಿಸಿದ್ದು ಸುಳ್ಳಲ್ಲ. ಇತ್ತೀಚಿನ ಮಾಹಿತಿಯ ಪ್ರಕಾರ ವಿಶ್ವದಲ್ಲಿ 8 ಬಿಲಿಯನ್ ಜನರ ಸಂಖ್ಯೆ ಮುಟ್ಟಿದೆ. ವಿಶ್ವ ಸಂಸ್ಥೆಯ ಅಂದಾಜಿನ ಪ್ರಕಾರ ಈ ಸಂಖ್ಯೆ ಹೀಗೆ ಹೆಚ್ಚಾಗುತ್ತಾ ಸಾಗಿದರೆ 2050ರಲ್ಲಿ ಈ ಸಂಖ್ಯೆ 2 ಬಿಲಿಯನ್ ಹೆಚ್ಚಾಗಲಿದ್ದು, ಅದು 10 ಬಿಲಿಯನ್ ದಾಟಬಹುದು ಎಂದು ತಿಳಿಸಿದೆ.

ಬೆಳೆಯುತ್ತಿರುವ ಜನಸಂಖ್ಯೆ ಹಲವು ತೊಂದರೆಗಳನ್ನು ಸೂಚಿಸುವಂತಿದೆ. ಆರೋಗ್ಯ ರಕ್ಷಣೆ, ನೈರ್ಮಲ್ಯ, ಜೀವನ ಪರಿಸ್ಥಿತಿಗಳ ಪ್ರಗತಿಯ ಸಮಸ್ಯೆಗಳನ್ನು ಎದುರಿಸಬಹುದು. ಎಲ್ಲ ಕ್ಷೇತ್ರಗಳಲ್ಲೂ ಅತ್ಯಾಧುನಿಕ ತಂತ್ರಜ್ಞಾನಗಳು ಬೆಳೆಯುತ್ತಿದ್ದು, ವಿಶೇಷ ಮಕ್ಕಳ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಇನ್ನು ಕಳೆದ ದಶಕದಲ್ಲಿ ಕ್ರಮೇಣವಾಗಿ ಜನ ಸಂಖ್ಯೆ ಪ್ರಮಾಣ ಏರು ಮುಖದಲ್ಲಿ ಸಾಗುತ್ತಿದೆ.

ಭಾರತ, ಚೀನಾದ ಎರಡು ನಗರಗಳು
ವಿಶ್ವ ಜನಸಂಖ್ಯೆಯ ವಿಮರ್ಶೆ ತಂಡವು ಇತ್ತೀಚಿಗೆ ವಿಶ್ವದಲ್ಲಿ ಅತಿ ಹೆಚ್ಚು ಜನರನ್ನು ಹೊಂದಿರುವ ದೇಶ ಹಾಗೂ ಪ್ರದೇಶಗಳನ್ನು ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ ಭಾರತ ಹಾಗೂ ಚೀನಾದ ಪ್ರದೇಶಗಳು ಎದ್ದು ಕಾಣುತ್ತಿವೆ. ಜನ ಸಂಖ್ಯೆ ಪ್ರಮಾಣ ಹೆಚ್ಚಾಗುತ್ತಿರುವುದರಲ್ಲಿ ಯಾವುದೇ ಸಂದೇಹವೂ ಇಲ್ಲದೆ ಭಾರತ, ಚೀನಾ ಹೆಸರು ಕಾಣಿಸಿಕೊಳ್ಳುವುದು ಸಹಜ. ಇದಕ್ಕೆ ಕಾರಣ ಈ ಎರಡೂ ದೇಶಗಳೇ ವಿಶ್ವದ ಗರಿಷ್ಠ ಜನಸಂಖ್ಯೆಯನ್ನು ಹೊಂದಿರುವ ಅಗ್ರ ರಾಷ್ಟ್ರಗಳಾಗಿವೆ.

ವಿಶ್ವ ಜನಸಂಖ್ಯೆಯ ವಿಮರ್ಶೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಲ್ಲಿ ಭಾರತದ ನಗರಗಳು ಮುಂಚೂಣಿಯಲ್ಲಿವೆ. ಭಾರತದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಜನ ಸಂಖ್ಯೆ ಪ್ರಮಾಣ ಶೇಕಡಾ 2.63 ರಷ್ಟು ಹೆಚ್ಚಾಗಿದೆ. ಇನ್ನು ಮುಬೈನಲ್ಲೂ ಇದರ ಸಂಖ್ಯೆ ಏರುಗತಿಯಲ್ಲಿ ಇದೆ. 2023ಕ್ಕೆ ಹೋಲಿಸಿದರೆ, ಈ ವರ್ಷದಲ್ಲಿ ಶೇಕಡಾ 1.77 ರಷ್ಟು ಹೆಚ್ಚಾಗಿದೆ.

ಟೋಕಿಯೊದಲ್ಲೂ ಇದ್ದಾರೆ ಹೆಚ್ಚಿನ ಜನ
ಜಪಾನ್ ದೇಶದ ಟೋಕಿಯೊ, ಅತ್ಯಂತ ವ್ಯಾಪಕವಾದ ಜನಸಂಖ್ಯೆಯನ್ನು ಹೊಂದಿದೆ. ಸಂಪೂರ್ಣ ಟೋಕಿಯೊ ಮಹಾನಗರ ಪ್ರದೇಶವನ್ನು ಪರಿಗಣಿಸಿದಾಗ ಒಟ್ಟು 37.1 ಮಿಲಿಯನ್ ನಿವಾಸಿಗಳು ಈ ನಗರದಲ್ಲಿ ವಾಸಿಸುತ್ತಿದ್ದಾರೆ. ಜಪಾನಿನ ಒಸಾಕಾ ಕೂಡ ಅಸಾಧಾರಣವಾಗಿ 19 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಚೀನಾದ ಎರಡು ಮಹಾನಗರಗಳಾದ ಶಾಂಘೈ ಮತ್ತು ಬೀಜಿಂಗ್, ಕ್ರಮವಾಗಿ 29.9 ಮಿಲಿಯನ್ ಮತ್ತು 22.2 ಮಿಲಿಯನ್ ಜನಸಂಖ್ಯೆಯನ್ನು ಹೊಂದಿವೆ.

2025ರಲ್ಲಿ ಭಾರತದ ಈ ನಗರಕ್ಕೆ ಪ್ರಥಮ ಸ್ಥಾನ
ಜಪಾನ್ನ ಟೋಕಿಯೊ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ, ಆದರೆ 2050 ರಲ್ಲಿ ಈ ಸ್ಥಾನವನ್ನು ಮುಂಬೈ ಪಡೆಯಲಿದೆ. ದೆಹಲಿ ಎರಡನೇ ಸ್ಥಾನ ಪಡೆಯುವ ಸಾಧ್ಯತೆ ಇದೆ. ಪ್ರಸ್ತುತ ಮುಂಬೈ ಒಂಬತ್ತನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದ್ದು, ದೆಹಲಿ ಇನ್ನೂ ಎರಡನೇ ಸ್ಥಾನದಲ್ಲಿದೆ. ಕೋಲ್ಕತ್ತಾ 17ನೇ ಸ್ಥಾನದಲ್ಲಿದೆ. 2050 ರ ಹೊತ್ತಿಗೆ, ಟೋಕಿಯೊ

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)