ವಾಗಟ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಯೋಗಪುರಿ ವರದರಾಜಸ್ವಾಮಿ ಬಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು...
ಸುಮಾರು 14 ಶತಮಾನಗಳಿಂದ ಈ ರಥೋತ್ಸವ ನಡೆಯುತ್ತಿದ್ದು ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರು ಅಗಮಿಸಿ ರಥೋತ್ಸವವನ್ನು ಕಣ್ತುಂಬಿಕೊಂಡರು....ವಿಶೇಷವಾಗಿ ಶ್ರೀ ಚಾಮುಂಡೇಶ್ವರಿ ಬಸಪ್ಪ,ಶ್ರೀ ಶನೇಶ್ವರ ಸ್ವಾಮಿ ಮಂಚನಹಳ್ಳಿ ಬಸಪ್ಪ, ಶ್ರೀ ಕಾಲಭೈರವೇಶ್ವರ ಸ್ವಾಮಿ ಬಸಪ್ಪರವರನ್ನು ಕರೆಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಯನ್ನು ಮಾಡಲಾಯಿತು.. ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಕಳಸಗಳನ್ನು ಹೊತ್ತು ನಡೆದರು..ರಥೋತ್ಸವದ ಮೆರಗನ್ನು ಹೆಚ್ಚಿಸಲು ವಿವಿಧ ಜಾನಪದ ಕಲಾತಂಡಗಳು ಅಗಮಿಸಿದ್ದವು..ವೀರಗಾಸೆ,ಡೊಳ್ಳು ಕುಣಿತ,ಅಂಜಿನೇಯ ವೇಷಧಾರಿ ಕುಣಿತ ನೋಡುಗರ ಮನಸೆಳೆಯಿತು...
ಮೂರು ಬಸಪ್ಪನವರ ನೇತೃತ್ವ ವಹಿಸಿದ್ದ ನಾಗೇಶ್ ವಿ (ಕೆ ಸಿ ಎಂ ಸಪ್ಲೇ ಚೈನ್ ಸಲ್ಯೂಷನ್ಸ್ ಪ್ರೈ ಲಿ) ನ ಮಾಲೀಕರು ನಮ್ಮ ವೇಗನ್ಯೂಸ್ ಕನ್ನಡ ದೊಂದಿಗೆ ಮಾತನಾಡಿ ಈ ರಥೋತ್ಸವ ನಾವೆಲ್ಲರೂ ಪ್ರತಿವರ್ಷ ಅಚರಿಸುತ್ತಾ ಬರುತ್ತಿದ್ದೇವೆ .5 ವರ್ಷಗಳಿಂದ ಬಸಪ್ಪನನ್ನು ಕರೆಸುತ್ತಿದ್ದೇವೆ..ಎಲ್ಲಾ ವರ್ಗದ ಜನರಿಗೆ ಒಳಿತಾಗಲಿ,ಮಳೆ ಬೆಳೆ ಚೆನ್ನಾಗಿ ಅಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು..
ನೆರೆದಿದ್ದ ಜನರ ಮುಖದಲ್ಲಿ ಸಂತೃಪ್ತಿಯ ಭಾವನೆ ಕಾಣುತ್ತಿತ್ತು...
🙏🙏🙏🙏
ಪ್ರತ್ಯುತ್ತರಅಳಿಸಿ