ಪೋರ್ಬ್ಸ್‌ ಬಿಲಿಯನೇರ್ ಲಿಸ್ಟ್‌: ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಇವರು!

Arun Kumar
0


ಪೋರ್ಬ್ಸ್‌ ಪಟ್ಟಿಯ ಟಾಪ್‌ 20ರಲ್ಲಿ ಯಾರಿದ್ದಾರೆ?

ಪೋರ್ಬ್ಸ್ ಪಟ್ಟಿಯ ಟಾಪ್ 20ರಲ್ಲಿ ಸ್ಥಾನ ಪಡೆದಿರುವ ಕೋಟ್ಯಾಧಿಪತಿಗಳೆಲ್ಲರ ಒಟ್ಟು ಆದಾಯಕ್ಕೆ 700 ಬಿಲಿಯನ್ ಡಾಲರ್‌ ಸೇರ್ಪಡೆಯಾಗಿದೆ. ಅಮೆರಿಕಾವೊಂದರಲ್ಲಿ ಅತೀ ಹೆಚ್ಚು ಅಂದರೆ 813 ಕೋಟ್ಯಾಧಿಪತಿಗಳು ಇದ್ದು, ಅತೀ ಹೆಚ್ಚು ಕೋಟ್ಯಾಧಿಪತಿಗಳನ್ನು ಹೊಂದಿರುವ ದೇಶ ಎನಿಸಿದೆ. ಹಾಗೆಯೇ ಚೀನಾ 473 ಕೋಟ್ಯಾಧಿಪತಿಗಳನ್ನು ಹೊಂದುವ ಮೂಲಕ 2ನೇ ಸ್ಥಾನದಲ್ಲಿದೆ. ಭಾರತ 200 ಕೋಟ್ಯಾಧಿಪತಿಗಳನ್ನು ಹೊಂದಿದೆ. 

ಪೋರ್ಬ್ಸ್ ಪಟ್ಟಿಯ ಪ್ರಕಾರ ಅತ್ಯಂತ ಶ್ರೀಮಂತ ಯಾರು?

ಫ್ರೆಂಚ್ ಉದ್ಯಮಿ ಬೆರ್ನಾಡ್‌ ಅರ್ನಾಲ್ಟ್ ಹಾಗೂ ಅವರ ಕುಟುಂಬ ಅತ್ಯಂತ ಶ್ರೀಮಂತ ಎನಿಸಿದ್ದು, 233 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದೆ. ಬೆರ್ನಾಡ್‌ ಅರ್ನಾಲ್ಟ್ ಎಲ್‌ವಿಎಂಹೆಚ್‌ನ ಮುಖ್ಯಸ್ಥರಾಗಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಎಲಾನ್ ಮಸ್ಕ್ ಅವರಿದ್ದು,  ಎಲಾನ್ ಮಸ್ಕ್ ನೆಟ್‌ವರ್ತ್ 195 ಬಿಲಿಯನ್ ಡಾಲರ್, ಹಾಗೆಯೇ ಮೂರನೇ ಸ್ಥಾನದಲ್ಲಿ ಅಮೇಜಾನ್ ಮುಖ್ಯಸ್ಥ ಜೆಫ್ ಬೇಜೋಸ್ ಅವರಿದ್ದು, ಅವರ ನಿವ್ವಳ ಮೌಲ್ಯವೂ ಕೂಡ 195 ಬಿಲಿಯನ್ ಡಾಲರ್ ಆಗಿದೆ. ಅವರ ನಂತರದಲ್ಲಿ ಫೇಸ್‌ಬುಕ್ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಇದ್ದು, ಇವರ ನಿವ್ವಳ ಮೌಲ್ಯ 177 ಬಿಲಿಯನ್ ಡಾಲರ್ ಆಗಿದೆ. 


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)