ಮಹೀಂದ್ರಾ ಕಂಪನಿಯು ಮಾರ್ಚ್ 29, 2024 ರಂದು ತನ್ನ ಹೊಸ ಕಾರೊಂದನ್ನು ಬಿಡುಗಡೆ ಮಾಡಲಿದೆ. ಮಹೀಂದ್ರಾ XUV 3XO ಕಾರನ್ನು ಕಂಪನಿ ಬಿಡುಗಡೆ ಮಾಡಿದ್ದು ಈಗಾಗಲೇ ಈ ಕುರಿತಾದ ಹಲವಾರು ಟೀಸರ್ಗಳನ್ನು ಸ್ವತಃ ಕಂಪನಿಯೇ ಬಿಡುಗಡೆ ಮಾಡಿದೆ. ಈ ಕಾರಿನಲ್ಲಿ ಯಾವೆಲ್ಲಾ ಫೀಚರ್ಗಳು ಇರಲಿದೆ ಎಂದು ನೋಡೋಣ.
ಸದ್ಯಕ್ಕೆ ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ XUV 300 ಕಾರಿನ ಅಪ್ಡೇಟೆಡ್ ವರ್ಷನ್ ಆಗಿರುವ ಈ ಕಾರು ಹಲವು ಅತ್ಯಾಧುನಿಕ ಫೀಚರ್ಗಳನ್ನು ಒಳಗೊಂಡಿರುವ ಈ ಕಾರಿನ ಕುರಿತಾದ ಹಲವಾರು ಮಾಹಿತಿಗಳು ಈಗಾಗಲೇ ಹೊರಬಿದ್ದಿವೆ. ಈ ಕಾರಿನಲ್ಲಿ ಲಕ್ಷುರಿ ಫೀಚರ್ಗಳು ಇರಲಿದೆ ಎಂಬ ಮಾತುಗಳು ಓಡಾಡುತ್ತಿದ್ದು, ಕಾರು ಕೊಳ್ಳುವವರು ಇದರ ಲಾಂಚ್ಗಾಗಿ ಎದುರು ನೋಡುತ್ತಿದ್ದಾರೆ.
ಹೊಸ ಇನ್ಫೋಟೈನ್ಮೆಂಟ್ ಸಿಸ್ಟಂ: 2024, XUV300 ದೊಡ್ಡದಾದ ಮತ್ತು ಹೊಸ 10.2-ಇಂಚಿನ ಫ್ರೀ-ಸ್ಟ್ಯಾಂಡಿಂಗ್ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸಿಗಲಿದೆ. ಮಹೀಂದ್ರಾದಿಂದ ಹೆಚ್ಚು ಸುಧಾರಿತ AdrenoX UI ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಇನ್ಫೋಟೈನ್ಮೆಂಟ್ ಸಿಸ್ಟಂ ಸಂಪೂರ್ಣ ಹೆಚ್ಚಿನ ಮಾಹಿತಿ ಮತ್ತು ವೈಶಿಷ್ಟ್ಯಗಳನ್ನು ಹೊಂದುವ ಸಾಧ್ಯತೆ ಇದ್ದು, ವಾಯ್ಸ್ ಕಮಾಂಡ್ ಮೂಲಕ ಹೆಚ್ಚು ಸುಧಾರಿತ ಸಂಪರ್ಕಿತ ತಂತ್ರಜ್ಞಾನಕ್ಕೆ ಸಿಗಲಿದೆ.
ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್: ಹೊಸ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಘಟಕದ ಹೊರತಾಗಿ, ಹೊಸ XUV 3XO ಹಳೆಯ ಮಾದರಿಯಲ್ಲಿ ಇದ್ದ ಭಾಗ ಡಿಜಿಟಲ್ ಮತ್ತು ಅನಲಾಗ್ ಕನ್ಸೋಲ್ ಬದಾಲಾಗಿ, ಹೊಸ 10.2-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಿಗಲಿದೆ ಎಂದು ತಿಳಿದು ಬಂದಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.