ಅನಿಮಲ್ ಚಿತ್ರದ ಬಗ್ಗೆ ಒಬ್ಬೊಬ್ಬರಲ್ಲಿ ಒಂದು ಅಭಿಪ್ರಾಯ ಇದೆ. ಕೆಲವರ ಪ್ರಕಾರ ಅನಿಮಲ್ ಬಾಲಿವುಡ್ ಇತಿಹಾಸದಲ್ಲಿಯೇ ಬಂದ ಅತ್ಯುತ್ತಮ ಸಿನಿಮಾ. ಇನ್ನೂ ಕೆಲವರ ಪ್ರಕಾರ ಅನಿಮಲ್ ಹಿಂಸಾವಿನೋದದ ಪರಾಕಾಷ್ಠೆ. ಇನ್ನೂ ಬಹುತೇಕರ ಪ್ರಕಾರ ಪುರುಷಾಹಂಕಾರದ ಮಾನಸಿಕತೆಗೆ ಕೈಗನ್ನಡಿ ಹಿಡಿದ ಸಿನಿಮಾ ಈ ಅನಿಮಲ್.
ಸಂದೀಪ್ ರೆಡ್ಡಿ ವಂಗಾ ಸೃಷ್ಟಿಸಿದ ಈ ಅನಿಮಲ್ ಚಿತ್ರದ ಪ್ರಭಾವ ಎಷ್ಟಿದೆ ಅಂದರೆ, ಚಿತ್ರ ತೆರೆಗೆ ಬಂದು ನಾಲ್ಕು ತಿಂಗ್ಳಾದರೂ ಈ ಚಿತ್ರದ ಕುರಿತು ಚರ್ಚೆ ಇನ್ನೂ ನಿಂತಿಲ್ಲ. ನಿಲ್ಲುವ ಲಕ್ಷಣವೂ ಕಾಣುತ್ತಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ.. ಸಕಾರಾತ್ಮಕ ಹಾಗೂ ಋಣಾತ್ಮಕ ವಿಮರ್ಶೆಗಳನ್ನ ಏಕಕಾಲಕ್ಕೆ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನಿಮಲ್ ಬಗ್ಗೆ ಮೇಘನಾ ರಾಜ್ ಈಗ ಮಾತನಾಡಿದ್ದಾರೆ. ಈ ತರಹದ ಚಿತ್ರವನ್ನ ಮಾಡಲು, ನಿಜಕ್ಕೂ ಎಂಟೆದೆ ಬೇಕು ಎಂಬ ಅರ್ಥದಲ್ಲಿ ಚಿತ್ರವನ್ನ ವಿಮರ್ಷಿಸಿದ್ದಾರೆ
ಹೌದು. ರ್ಯಾಪಿಡ್ ರಶ್ಮಿ ಅವರ ಜೊತೆ ತಮ್ಮ ಮನದ ಮಾತನ್ನ ಇತ್ತೀಚೆಗಷ್ಟೇ ಹಂಚಿಕೊಂಡಿರುವ ಮೇಘನಾ ರಾಜ್, ತಮ್ಮ ದೃಷ್ಟಿಕೋನದಲ್ಲಿ ಅನಿಮಲ್ ಚಿತ್ರವನ್ನ ವಿಶ್ಲೇಷಿಸಿದ್ದಾರೆ. ನಿಜಾ.. ಅನಿಮಲ್ ಚಿತ್ರದಲ್ಲಿ ಎಲ್ಲವೂ ಅಗತ್ಯಕ್ಕಿಂತ ಹೆಚ್ಚಿದೆ. ಆದರೆ.. ಅನಿಮಲ್ ಚಿತ್ರದಲ್ಲಿ ಬದುಕಿನ ಬ್ಲ್ಯಾಕ್ & ವೈಟ್ ಬಣ್ಣಗಳಿವೆ ಅಂದಿದ್ದಾರೆ. ಈ ರೀತಿಯ ಸಿನಿಮಾ ಮಾಡಲು ನಿಜಕ್ಕೂ ಧೈರ್ಯ ಬೇಕು ಅಂದಿದ್ದಾರೆ
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.