ಬೆಂಗಳೂರು ಮೂಲಕ ರಿಯಲ್ ಎಸ್ಟೇಟ್ ಡೆವಲಪರ್ ಪ್ರೆಸ್ಟೀಜ್ ಗ್ರೂಪ್ ನಗರದಲ್ಲಿ 21 ಎಕರೆ ಭೂಮಿಯನ್ನು ಖರೀದಿ ಮಾಡಿದ್ದು, 1,800 ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ.
ನಗರದ ಟೆಕ್ ಕಾರಿಡಾರ್ ವೈಟ್ಫೀಲ್ಡ್ನಲ್ಲಿ ಬರೋಬ್ಬರಿ ₹450 ಕೋಟಿ ನೀಡಿ 21 ಎಕರೆ ಭೂಮಿಯನ್ನು ಖರೀದಿ ಮಾಡಿದೆ. ಈ ಭೂಮಿಯಲ್ಲಿ ಸುಮಾರು 4 ಮಿಲಿಯನ್ ಚದರ ಅಡಿ ವಿಸ್ತೀರ್ಣದ ವಸತಿ ಅಭಿವೃದ್ಧಿಗೆ ಮೀಸಲಿಡಲಾಗಿದೆ ಎಂದು ಹೇಳಿದೆ.
ಪ್ರೆಸ್ಟೀಜ್ ಗ್ರೂಪ್ ಈ ವರ್ಷ ಎರಡನೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಖರೀದಿ ಮಾಡಿದೆ. ಮಾರ್ಚ್ ತಿಂಗಳಿನಲ್ಲಿ ₹468 ಕೋಟಿ ವೆಚ್ಚದಲ್ಲಿ ಗಾಜಿಯಾಬಾದ್ನ ಇಂದಿರಾಪುರಂ ಎಕ್ಸ್ಟೆನ್ಶನ್ನಲ್ಲಿ 62.5 ಎಕರೆಯನ್ನು ಸ್ವಾಧೀನಪಡಿಸಿಕೊಂಡಿತ್ತು. ಅದಾದ ಬಳಿಕ ಈಗ ಬೆಂಗಳೂರಿನಲ್ಲಿ ಜಾಗವನ್ನು ಖರೀದಿ ಮಾಡಿದೆ.
₹ 4,500 ಕೋಟಿ ಅಭಿವೃದ್ಧಿ ಮೌಲ್ಯ
ಪ್ರೆಸ್ಟೀಜ್ ಗ್ರೂಪ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಇರ್ಫಾನ್ ರಜಾಕ್, ಈ ಬೃಹತ್ ಯೋಜನೆಯು ₹ 4,500 ಕೋಟಿಗಳ ಒಟ್ಟು ಅಭಿವೃದ್ಧಿ ಮೌಲ್ಯವನ್ನು (ಜಿಡಿವಿ) ಉತ್ಪಾದಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.