Arecanut Price: ಬರದ ನಡುವೆಯೂ ಕುಸಿದ ಅಡಿಕೆ ಬೆಲೆ

Arun Kumar
0

ರಾಜ್ಯದಲ್ಲಿ ಬರದ ನಡುವೆ ಅಡಿಕೆ ಧಾರಣೆ ಅಲ್ಪ ಕುಸಿತ ಕಂಡಿದ್ದು, ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಹೆಚ್ಚುತ್ತಿರುವ ತಾಪಮಾನ, ಭೀಕರ ಬರದಿಂದ ಅಡಿಕೆ ಬೆಳೆ ಕಾಪಾಡಿಕೊಳ್ಳುವುದೇ ಸವಾಲಾಗಿದೆ. ಇಂತಹ ಸಂದರ್ಭದಲ್ಲೂ ಅಡಿಕೆ ಧಾರಣೆ ಏರಿಕೆ ಕಾಣುವುದಿರಲಿ, ಬೆಲೆ ಕುಸಿತವಾಗುತ್ತಿರುವುದು ಬೆಳೆಗಾರರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಗರಿಷ್ಠ ₹49,000 ಸಾವಿರ ತಲುಪಿದ್ದ ಅಡಿಕೆ ಧಾರಣೆ ₹1,000 ದವರೆಗೆ ಕುಸಿತ ಕಂಡಿದೆ. ಸೋಮವಾರ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಕೆಂಪಡಕೆ ಧಾರಣೆ ಅಲ್ಪ ಕುಸಿತ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಚಿತ್ರದುರ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕ್ವಿಂಟಲ್ಗೆ ಕನಿಷ್ಠ ₹48,129 ಇದ್ದರೆ ಗರಿಷ್ಠ ₹48,569 ಆಗಿತ್ತು.

ರಾಜ್ಯದ ಪ್ರಮುಖ ಅಡಿಕೆ ಮಾರುಟಕಟ್ಟೆ ಶಿವಮೊಗ್ಗದಲ್ಲಿ ರಾಶಿ ಕೆಂಪಡಿಕೆ ಧಾರಣೆ ಕನಿಷ್ಠ ₹32,279 ಗರಿಷ್ಠ ₹48,858 ಆಗಿತ್ತು, ಸರಕು ಅಡಿಕೆ ಧಾರಣೆ ₹53,010 ಇತ್ತು. ಬೆಟ್ಟೆ ಅಡಿಕೆ ಧಾರಣೆ ಕನಿಷ್ಠ ₹41,509 ಗರಿಷ್ಠ ₹47,899 ಆಗಿತ್ತು. ಸಿದ್ಧಾಪುರ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ ₹42,089 ಇದ್ದರೆ ಗರಿಷ್ಠ ₹46,499 ಇತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)