ವಿಶ್ವ ಹಿಮೋಫಿಲಿಯಾ ದಿನ 2024: ರಕ್ತ ಹೆಪ್ಪುಗಟ್ಟದಿರುವ ಸಮಸ್ಯೆ ವಯಸ್ಸಾಗುತ್ತಿದ್ದಂತೆ ಮತ್ತಷ್ಟು ಹೆಚ್ಚುವುದೇ?

Arun Kumar
0

ಡಾ. ವಿನಯ್ ಮುನಿಕೋಟಿ ವೆಂಕಟೇಶ್, ಕನ್ಸಲ್ಟೆಂಟ್ - ಪೀಡಿಯಾಟ್ರಿಕ್ ಹೆಮಟಾಲಜಿ ಆಂಕೊಲಾಜಿ & BMT, ಮಣಿಪಾಲ್ ಆಸ್ಪತ್ರೆ ಯಶವಂತಪುರ ಮತ್ತು ವೈಟ್ಫೀಲ್ಡ್

ಹಿಮೋಫಿಲಿಯಾ ಒಂದು ಅತಿ ವಿರಳ ರಕ್ತಸ್ರಾವದ ಕಾಯಿಲೆಯಾಗಿದ್ದು, ಅದು "ಕ್ಲೋಟಿಂಗ್ ಫ್ಯಾಕ್ಟರ್ಸ್" ಎಂದು ಕರೆಯಲ್ಪಡುವ ಪ್ರೋಟೀನ್ ಕೊರತೆಯಿಂದ ಉಂಟಾಗುತ್ತದೆ. "ಹೆಮೋ ಎಂದರೆ ರಕ್ತ ಮತ್ತು "ಫಿಲಿಯಾ" ಎಂದರೆ ಪ್ರೀತಿ ಅಥವಾ ಪ್ರವೃತ್ತಿ ಎಂದರ್ಥ.

ಆದ್ದರಿಂದ ಹಿಮೋಫಿಲಿಯಾ ರಕ್ತಸ್ರಾವದ ಪ್ರವೃತ್ತಿ ಎಂಬ ಅರ್ಥವನ್ನೂ ನೀಡುತ್ತದೆ. ಹಿಮೋಫಿಲಿಯಾ ಇರುವವರ ರಕ್ತವು ಬೇಗನೆ ಹೆಪ್ಪುಗಟ್ಟುವುದಿಲ್ಲ, ಆದ್ದರಿಂದ ಅವರು ಗಾಯಗೊಂಡ ನಂತರ ಅಥವಾ ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಹೆಚ್ಚು ರಕ್ತಸ್ರಾವವನ್ನು ಅನುಭವಿಸುತ್ತಾರೆ.

ಹಿಮೋಫಿಲಿಯಾ ವಿಧಗಳು: - ಹಿಮೋಫಿಲಿಯಾ A - ಫ್ಯಾಕ್ಟರ್ VIII ನ ಕೊರತೆ; ಹಿಮೋಫಿಲಿಯಾ B - ಫ್ಯಾಕ್ಟರ್ IX ನ ಕೊರತೆ; ಹಿಮೋಫಿಲಿಯಾ C - ಫ್ಯಾಕ್ಟರ್ XI ನ ಕೊರತೆ. ತೀವ್ರತೆಯ ಆಧಾರದ ಮೇಲೆ ಇದರ ವರ್ಗಿಕರಣ ಹೀಗಿದೆ: ಕಡಿಮೆ (ಫ್ಯಾಕ್ಟರ್ ಮಟ್ಟ 5-40%), ಮಧ್ಯಮ (ಫ್ಯಾಕ್ಟರ್ ಮಟ್ಟ 1-5%) ಮತ್ತು ತೀವ್ರ (ಫ್ಯಾಕ್ಟರ್ ಮಟ್ಟ 

ಹಿಮೋಫಿಲಿಯಾ A ಮತ್ತು B ಎಂಬುದು X-ಲಿಂಕ್ ಆನುವಂಶಿಕ ಅಸ್ವಸ್ಥತೆ ಆಗಿದ್ದು, ಇದು ಹೆಚ್ಚಾಗಿ ಪುರುಷರ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರು ಹಿಮೋಫಿಲಿಯಾ ವಂಶವಾಹಿಯನ್ನು ಹೊಂದಿರುತ್ತಾರೆ ಆದರೆ ಸಾಮಾನ್ಯವಾಗಿ ರೋಗಕ್ಕೆ ಒಳಗಾಗುವುದಿಲ್ಲ.

ಹಿಮೋಫಿಲಿಯಾದಲ್ಲಿ ರಕ್ತಸ್ರಾವವಾಗುವ ಸ್ಥಳಗಳು:
ತೀವ್ರವಾದ ಹಿಮೋಫಿಲಿಯಾದಲ್ಲಿ ರಕ್ತಸ್ರಾವವಾಗುವ ಸಾಮಾನ್ಯ ಸ್ಥಳವೆಂದರೆ ಕೀಲುಗಳು, ವಿಶೇಷವಾಗಿ ಮೊಣಕಾಲುಗಳು ಮತ್ತು ಪಾದಗಳು. ರಕ್ತಸ್ರಾವದ ಇತರ ಸಾಮಾನ್ಯ ಸ್ಥಳಗಳೆಂದರೆ ಚರ್ಮ, ಒಸಡುಗಳು, ಮೂಗು, ಸ್ನಾಯುಗಳು ಮತ್ತು ಕೆಲವೊಮ್ಮೆ ದೇಹದ ಒಳಗೆ ಕೂಡ.

ಸಾಮಾನ್ಯವಾಗಿ, ರಕ್ತಸ್ರಾವವು "ಟಾರ್ಗೆಟ್" ಕೀಲುಗಳು ಎಂದು ಕರೆಯಲ್ಪಡುವ ಒಂದು ಅಥವಾ ಎರಡು ಕೀಲುಗಳಲ್ಲಿ ಹೆಚ್ಚಾಗಿ ಸಂಭವಿಸುತ್ತದೆ. ಕೀಲುಗಳಲ್ಲಿ ರಕ್ತಸ್ರಾವವು ನಿರಂತರವಾಗಿ ಸಂಭವಿಸಿದಲ್ಲಿ, ಅವು ಗಾಯಗೊಂಡು ವಿರೂಪಗೊಳ್ಳಬಹುದು ಮತ್ತು ಸರಿಯಾಗಿ ಕೆಲಸ ಮಾಡದೇ ಇರಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)