ಕನ್ನಡಿಗರ ಕಣ ಕಣದಲ್ಲೂ ಬೆರೆತು ಹೋಗಿರುವ ಆರ್‌ಸಿಬಿ ತಂಡಕ್ಕೆ ಈ ದಿನ ಸುದಿನ. ಈ ದಿನವನ್ನು ನಮ್ಮ ಕನ್ನಡಿಗರು ಅದರಲ್ಲೂ ಕ್ರಿಕೆಟ್ ಅಭಿಮಾನಿಗಳು, ಇನ್ನೂ ಮೀರಿ RCBಯ ಪಕ್ಕಾ ಅಭಿಮಾನಿಗಳು ತಮ್ಮ ಜೀವ ಇರುವವರೆಗೂ ಮರೆಯೋದಿಲ್ಲ. ಯಾಕಂದ್ರೆ ನಾವೆಲ್ಲ 17 ವರ್ಷಗಳಿಂದ ಉಸಿರು ಬಿಗಿ ಹಿಡಿದು ಯಾವ ದಿನಕ್ಕಾಗಿ ಕಾಯುತ್ತಾ ಇದ್ದೆವೋ, ಆ ದಿನ ಇಂದು ಬಂದೇ ಬಿಟ್ಟಿದೆ. ನಮ್ಮ ಆರ್‌ಸಿಬಿ (Royal Challengers Bengaluru) ತಂಡ ಕಪ್ ಗೆದ್ದೇ ಬಿಟ್ಟಿದೆ!
ಹೌದು ಹುಡುಗರು ಮಾಡದ ಕೆಲಸವನ್ನ ನಮ್ಮ 'ಆರ್‌ಸಿಬಿ' ಹುಡುಗಿಯರು ಮಾಡಿದ್ದಾರೆ. ಅದರಲ್ಲೂ ಬೆಂಗಳೂರು ಕ್ರಿಕೆಟ್ ಅಭಿಮಾನಿಗಳು ಇಂದು ಹೆಮ್ಮೆಯಿಂದ ಆರ್‌ಸಿಬಿ ಬಾವುಟ ಹಿಡಿದು, ಜೋರಾಗಿ ಆರ್‌ಸಿಬಿ ಎಂದು ಘರ್ಜಿಸುವ ಅವಕಾಶ ಕೊಟ್ಟಿದ್ದಾರೆ. 2024ರ ಸಾಲಿನ ವುಮೆನ್ಸ್ ಪ್ರಿಮಿಯರ್ ಲೀಗ್ ಅಂದ್ರೆ ಡಬ್ಲ್ಯೂಪಿಎಲ್ (WPL) ಟೂರ್ನಿ ಗೆದ್ದು ಬೀಗಿ ಆರ್‌ಸಿಬಿ ತಂಡಕ್ಕೆ ಮೊಟ್ಟ ಮೊದಲ ಕಪ್ ತಂದುಕೊಟ್ಟಿದ್ದಾರೆ. ಇದುವರೆಗೆ ಹುಡುಗರ ತಂಡ ಐಪಿಎಲ್ (IPL) ಟೂರ್ನಿಯಲ್ಲಿ ಮಾಡದ ಸಾಧನೆಯನ್ನು, ನಮ್ಮ ಆರ್‌ಸಿಬಿ ಹುಡುಗಿಯರು ಇದೀಗ ಡಬ್ಲ್ಯೂಪಿಎಲ್ (WPL) ಟೂರ್ನಿಯಲ್ಲಿ ಸಾಧಿಸಿ ತೋರಿಸಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ಮಣ್ಣು ಮುಕ್ಕಿಸಿ ಆರ್‌ಸಿಬಿ ಬೆಂಗಳೂರು ತಂಡ ಈಗ ಕಪ್ ಗೆದ್ದು ಅದಕ್ಕೆ ಮುತ್ತಿಕ್ಕಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರ್‌ಸಿಬಿ ತಂಡದ ಹುಡುಗಿಯರ ಬೌಲಿಂಗ್ ದಾಳಿಗೆ ಪೀಸ್ ಪೀಸ್ ಆಗಿ ಹೋಗಿತ್ತು. ಈ ಮೂಲಕ ಕೇವಲ 113 ರನ್‌ಗಳಿಗೆ ಈ ದೆಹಲಿ ತಂಡವು ಆಲೌಟ್ ಆಗಿ ಹೋಗಿತ್ತು. ಇನ್ನು 114 ರನ್‌ಗಳ ಗುರಿ ಬೆನ್ನುಹತ್ತಿದ್ದ ನಮ್ಮ ಆರ್‌ಸಿಬಿ ಹುಡುಗಿಯರು ಇದೀಗ ಇತಿಹಾಸ ನಿರ್ಮಿಸಿದ್ದಾರೆ. ಕೇವಲ 2 ವಿಕೆಟ್ ಕಳೆದುಕೊಂಡು ನಮ್ಮ ಆರ್‌ಸಿಬಿ ತಂಡ ಇದೀಗ ದೆಹಲಿ ಕ್ಯಾಪಿಟಲ್ಸ್ ನೀಡಿದ್ದ 114 ರನ್‌ಗಳ ಗುರಿ ಮುಟ್ಟಿದೆ. ಈ ಮೂಲಕ 17 ವರ್ಷಗಳ ನಂತರ ಆರ್‌ಸಿಬಿ ತಂಡ ಕಪ್ ಗೆದ್ದಿದೆ. ಅದೂ ಬೆಂಗಳೂರು ಟೀಂ ಹುಡುಗಿಯರು ಈ ಸಾಧನೆ ಮಾಡಿರುವುದು ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.