Job Alert: ಬೆಂಗಳೂರಿನಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆ ಖಾಲಿ ಇದೆ- ಆಸಕ್ತರು ಬೇಗ ಅಪ್ಲೈ ಮಾಡಿ

Arun Kumar
0

 

ಆಸಕ್ತರು ಇದೇ ಅಕ್ಟೋಬರ್ 17, 2023 ರೊಳಗೆ ತಮ್ಮ ರೆಸ್ಯೂಮ್​ನ್ನು ಇ-ಮೇಲ್ ಮಾಡಿ.

JNCASR Recruitment 2023: ಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್( Jawaharlal Nehru Centre For Advanced Scientific Research) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಟೆಕ್ನಿಕಲ್ ಅಸಿಸ್ಟೆಂಟ್ (ಇನ್​ಸ್ಟ್ರುಮೆಂಟ್ ಆಪರೇಟರ್) ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುವುದು. ಸಿಲಿಕಾನ್ ಸಿಟಿಯಲ್ಲಿ ಉದ್ಯೋಗ ಮಾಡಲು ಬಯಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ಇದೇ ಅಕ್ಟೋಬರ್ 17, 2023 ರೊಳಗೆ ತಮ್ಮ ರೆಸ್ಯೂಮ್​ನ್ನು ಇ-ಮೇಲ್ ಮಾಡಿ.


ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್
ಹುದ್ದೆಟೆಕ್ನಿಕಲ್ ಅಸಿಸ್ಟೆಂಟ್
ಒಟ್ಟು ಹುದ್ದೆ1
ವಿದ್ಯಾರ್ಹತೆಎಂ.ಎಸ್ಸಿ, ಪಿಎಚ್​.ಡಿ
ವೇತನನಿಗದಿಪಡಿಸಿಲ್ಲ
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಅಕ್ಟೋಬರ್ 17, 2023

ವಿದ್ಯಾರ್ಹತೆ:
ಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂ.ಎಸ್ಸಿ, ಪಿಎಚ್​.ಡಿ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಆಯ್ಕೆ ಪ್ರಕ್ರಿಯೆ:
ಟೆಕ್ನಿಕಲ್ ಡಿಸ್ಕಶನ್
ಪರ್ಸನಲ್ ಇಂಟರ್​​ಯಾಕ್ಷನ್
ಸಂದರ್ಶನ


ವೇತನ:
ನಿಗದಿಪಡಿಸಿಲ್ಲ.

ಉದ್ಯೋಗದ ಸ್ಥಳ:
ಬೆಂಗಳೂರು


ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ sebastiancp@jncasr.ac.in ಗೆ ಕಳುಹಿಸಬೇಕು.


ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ: 12/10/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: ಅಕ್ಟೋಬರ್ 17, 2023

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)