Yash Next Project: ಅಸ್ಕರ್ ಬೇಟೆಗೆ ಸಜ್ಜಾದ ರಾಕಿ ಬಾಯ್​​; ಗ್ಲೋಬಲ್ ಲೆವೆಲ್​ ಸಿನಿಮಾ ಫಿಕ್ಸ್​!

Arun Kumar
0

 

ಈ ಸಲ ಆಸ್ಕರ್ ಗೆದ್ದೆ ಗೆಲ್ಲಬೇಕು ಎಂಬ ಪಣ ತೊಟ್ಟಿರುವ ರಾಕಿ ತಮ್ಮ ಮಹತ್ವಾಕಾಂಕ್ಷೆಯ ಡ್ರೀಮ್ ಪ್ರಾಜೆಕ್ಟ್ ಅನ್ನು ಅತೀ ಶೀಘ್ರದಲ್ಲೇ ಅಧಿಕೃತವಾಗಿ ಅನೌನ್ಸ್ ಮಾಡೊಕೆ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. (ವರದಿ: ಸಂತೋಷ್​, ಸಿನಿಮಾ ಬ್ಯುರೋ, ನ್ಯೂಸ್ 18 ಕನ್ನಡ)

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ನಂತ್ರ ಮುಂದೇನು ಮಾಡ್ತಾರೆ ಅನ್ನೋ ಪ್ರಶ್ನೆ ಪ್ಯಾನ್ ವರ್ಲ್ಡ್ ಪ್ರೇಕ್ಷಕರ ಕಾಡ್ತಿದೆ. ಆದರೆ ಯಶ್ ತಮ್ಮ 19 ನೇ ಚಿತ್ರದ ಗುಟ್ಟು ಇದುವರೆಗೂ ಬಿಟ್ಟು ಕೊಟ್ಟಿಲ್ಲ. ಯಶ್ ತಮ್ಮ ಮುಂದಿನ ಚಿತ್ರಕ್ಕಾಗಿ ಯಾರೂ ಊಹೆ ಮಾಡದ ರೀತಿ ಯೋಚನೆ ಮತ್ತು ಯೋಜನೆ ಹಾಕಿಕೊಂಡಿದ್ದಾರೆ. ರಾಕಿಯ ಈ ಡ್ರೀಮ್ ಪ್ರಾಜೆಕ್ಟ್ ಗಾಗಿ ಮೂರು ಚಿತ್ರರಂಗಗಳ ಮಹಾ ಸಂಗಮಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ರಾಕಿ ಕಂಡಿರುವ ದೊಡ್ಡ ಕನಸ್ಸನ್ನು ನನಸು ಮಾಡಲು ಒಂದಾಗಿರೋ ಮೂರು ಚಿತ್ರರಂಗಗಳು ಯಾವು? ಅದ್ಯಾವ ಕನಸ್ಸಿಗಾಗಿ ರಾಕಿ ಚಿತ್ರರಂಗದ ತ್ರಿವೇಣಿ ಸಂಗಮಕ್ಕೆ ರಾಕಿ ಕಷ್ಟ ಪಟ್ಟಿದ್ದಾರೆ ಅನ್ನೋದರ ಕಂಪ್ಲೀಟ್ ಡಿಟೈಲ್ ಇಲ್ಲಿದೆ ಓದಿ.
ಕೆಜಿಎಫ್ 2 ರಿಲೀಸ್ ಆಗಿ ಬರೋಬರಿ 17 ತಿಂಗಳು ಗಳು ಕಳೆದಿವೆ. ಆದರೆ ಇದುವರೆಗೂ ರಾಕಿ ಅಧಿಕೃತ ವಾಗಿ ತಮ್ಮ ಮುಂದಿನ ಸಿನಿಮಾ ಪ್ರಯಾಣದ ಬಗ್ಗೆ ಬಾಯ್ಬಿಟ್ಟ. ಯಾರೇ ಕೇಳಿದ್ರು ಪಕ್ಕಾ ಪ್ಲಾನ್ ಮಾಡಿ ಸಿನಿಮಾ ಅಪ್ಡೇಟ್ ಕೊಡ್ತಿನಿ ಅಂತ ಯಶ್ ಹೇಳಿದ್ರು. ಯಶ್ ಮುಂದಿನ ಚಿತ್ರವನ್ನು ನರ್ತನ್ ಡೈರೆಕ್ಷನ್ ಮಾಡ್ತಾರೆ. ಕೆವಿಎನ್ ಪ್ರೊಡಕ್ಷನ್ ಅವ್ರು ನಿರ್ಮಾಣ ಮಾಡ್ತಾರೆ ಅನ್ನೋದಷ್ಟೇ ಅಲ್ಲಾ. ಸನ್ ಪಿಕ್ಚರ್ಸ್ ನಿರ್ಮಾಣದಲ್ಲಿ ಇಂಡಿಯನ್ ಸೂಪರ್ ಸ್ಟಾರ್ ಡೈರೆಕ್ಟರ್ ಶಂಕರ್ ಆಕ್ಷನ್ ಕಟ್ ಹೇಳ್ತಾರೆ ಅನ್ನೋದ್ರ ಜೊತೆಗೆ, ಕೆಜಿಎಫ್ ಟೀಮ್ ಜೊತೆಗೆ ರಾಕಿ ಮತ್ತೆ ತಮ್ಮ ಸಿನಿಮಾ ಹೆಜ್ಜೆ ಇಡ್ತಾರೆ. ಕೆಜಿಎಫ್ 3 ಬರೋದು ಪಕ್ಕಾ ಅನ್ಮೋ ಸಮಾಚಾರ ಸೌಂಡ್ ಮಾಡಿತ್ತು. ಅದ್ರೆ ಈ ಸುದ್ದಿ ಸದ್ದು ಮಾಡಿದಕ್ಕಿಂತ ಸ್ಪೀಡ್ ಆಗಿ ಸುಳ್ಳು ಅನ್ನೋದು ಕನ್ಪರ್ಮ್ ಆಗಿತ್ತು.
ಇಷ್ಟೇಲ್ಲಾ ಅದ್ರು ರಾಕಿ ಆಭಿಮಾನಿಗಳ ಅಂಗಳಕ್ಕೆ ಸದ್ದಿಲ್ಲದೆ ಹೊಸ ಸುದ್ದಿಯೊಂದು ಸೇರಿತ್ತು. ಅ ಸುದ್ದಿ ಏನಪ್ಪ ಅಂದರೆ ಯಶ್ 19 ಚಿತ್ರ ಮಾಲಿವುಡ್ ನ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್ ದಾಸ್ ಅಂಗಳಕ್ಕೆ ಸೇರಿದೆ. ಗೀತು ಮೋಹನ್ ದಾಸ್ ಯಶ್ 19 ಚಿತ್ರಕ್ಕೆ ಆಕ್ಷನ್ ಕಠ್ ಹೇಳೊದು ಪಕ್ಕಾ. ಈಗಾಗಲೇ ಗೀತು ಮೋಹನ್ ದಾಸ್ ರಾಕಿ ಮುಂದಿನ ಚಿತ್ರಕ್ಕೆ ಅದ್ಬುತವಾದ ಕತೆ ಪೋಣಿಸಿದ್ದು, ತೆರೆ ಮರೆಯಲ್ಲಿ ಈ‌ಚಿತ್ರಕ್ಕೆ ಗಟ್ಟಿ ತಂಡ ಕಟ್ಟಿ. ಕಂಪ್ಲೀಟ್ ಪ್ರೀ ಪ್ರೊಡಕ್ಷನ್ ವರ್ಕ್ ಮುಗಿಸಿ, ಒಂದೊಳ್ಳೊ ಶುಭಗಳಿಗೆ ನೋಡಿ ಯಶ್ ತಮ್ಮ ಮುಂದಿನ ಚಿತ್ರ ಅನೌನ್ಸ್ ಮಾಡೊಕೆ ತಯಾರಿ ಮಾಡಿದ್ದಾರೆ ಅನ್ನೋದು ಈಗ ಟ್ರೆಂಡ್ ನಲ್ಲಿರೋ ವಿಷ್ಯ.
ಯೆಸ್, ರಾಕಿಂಗ್ ಸ್ಟಾಯಶ್ ಸದ್ದಿಲ್ಲದೆ ತಮ್ಮ ಮುಂದಿನ ಚಿತ್ರಕ್ಕೆ ಭರ್ಜರಿ ತಯಾರಿ ಮಾಡಿದ್ದಾರೆ. ಯಶ್ 19 ಚಿತ್ರಕ್ಕೆ ಮಾಲಿವುಡ್ ಟ್ಯಾಲೆಂಟೆಡ್ ನಿರ್ದೇಶಕಿ ಗೀತು ಮೋಹನ್ ದಾಸ್ ಸಾರಥಿಯಾಗೋ ದ್ರಲ್ಲಿ ಯಾವುದೇ ಡೌಟ್ ಇಲ್ಲ. ಈಗಾಗಲೇ ರಾಕಿ ಗೀತು ಮೋಹನ್ ದಾಸ್ ಕತೆಯನ್ನು ಫೈನಲ್ ಮಾಡಿದ್ದು, ಚಿತ್ರಕತೆ ಮತ್ತು ಸಂಭಾಷಣೆ ಬರೆಯೋ ಕೆಲಸ ಈಗ ಭರದಿಂದ ಸಾಗಿದೆ..ಅದ್ರೆ ಈ ಚಿತ್ರವನ್ನು ಯಾರು ನಿರ್ಮಾಣ ಮಾಡ್ತಾರೆ ಅನ್ನೋ ಮೂಲ ಹುಡುಕಿ ಹೊರಟ ನ್ಯೂಸ್ 18 ಕನ್ನಡ ಸಿನಿಮಾ ಬಳಗಕ್ಕೆ ಸಿಕ್ಕ ಉತ್ತರ ರಾಕಿಂಗ್ ಸ್ಟಾರ್ ಯಶ್ ಪುತ್ರಿ ಐರಾ.
ಹೌದು, ಕೆಜಿಎಫ್ 2 ನಂತ್ರ ಬರುವ ಯಶ್ ಚಿತ್ರ ರಾಕಿಂಗ್ ಸ್ಟಾರ್ ಯಶ್ ಹೋಮ್ ಪ್ರೋಡಕ್ಷನ್ ನಲ್ಲೆ ಅರಳಲಿದೆ. ಯಶ್ ಈಗಾಗಲೇ ಇದಕ್ಕೆ ಬೇಕಾದ ಸಕಲ ಸಿದ್ದತೆ ಮಾಡಿಕೊಂಡು, ಮಗಳು ಐರಾ ಹೆಸರಿನಲ್ಲಿ ಐರಾ ಪ್ರೋಡಕ್ಷನ್ ಹುಟ್ಟು ಹಾಕಿದ್ದು , ಐರಾ ಪ್ರೋಡಕ್ಷನ್ ನಲ್ಲಿ ಯಶ್ ಮುಂದಿನ ಚಿತ್ರ ಮೂಡಿಬರೋದು ಕನ್ಪರ್ಮ್ ಆಗಿದೆ. ಇಡೀ ವಿಶ್ವವೇ ಯಶ್ ಮುಂದಿನ ನಡೆ ಬಗ್ಗೆ ಯೋಚನೆ ಮಾಡ್ತಿರುವ ವೇಳೆ ತಮ್ಮ ಜವಬ್ದಾರಿ ಅರಿತ ಯಶ್ ನಟನೆ ಜೊತೆಗೆ ನಿರ್ಮಾಣಕ್ಕೂ ಕೈ ಹಾಕುವ ಮೂಲಕ. ಯಶ್ ಅಭಿಮಾನಿಗಳಿಗೆ ಕೊಟ್ಟಿರುವ ಮಾತಿನಂತೆ ಒಂದೋಳ್ಳೆ ಪ್ರಾಜೆಕ್ಟ್‌ ಕೊಡಲೇ ಬೇಕು ಎಂಬ ಅಲೋಚನೆಯಲ್ಲಿ ಇದುವರೆಹೂ ಕಮರ್ಷಿಯಲ್ ಸಿನಿಮಾ ಮಾಡಿರದ ಗೀತು ಮೋಹನ್ ದಾಸ್ ಗೆ ನಿರ್ದೇಶನದ ಜವಾಬ್ದಾರಿ ಕೊಟ್ಟು, ನಟನೆ ಜೊತೆಗೆ ನಿರ್ಮಾಪಕನಾಗಿ ಮಗಳ ಹೆಸರಲ್ಲಿ ಮತ್ತೊಂದು ಅಗ್ನಿಪರೀಕ್ಷೆಗೆ ರಾಕಿಂಗ್ ಸ್ಟಾರ್ ಸಜ್ಜಾಗ್ತಿದ್ದಾರೆ.
ಅಬ್ಬಾ ಏನು ಇದು ನಿಜವಾಗ್ಲೂ ಸತ್ಯನಾ ಎಂಬ ಪ್ರಶ್ನೆ ಪ್ರತಿಯೊಬ್ಬರಿಗೂ ಕಾಡುತ್ತೆ. ಆದರೆ ಇದು ಸುಳ್ಳು ಎಂದು ಹೇಳೊಕೆ ಒಂದೇ ಒಂದೇ ರೀಸನ್ ಇಲ್ಲ. ಆದರೆ ಸತ್ಯ ಅಂತ ಹೇಳೋಕೆ ಸಾಕಷ್ಟು ಪುರಾವೆಗಳಿವೆ. ಅವು ಯಾವು ಅಂತ ನೋಡೋದಾದ್ರೆ ರಾಕಿಂಗ್ ಸ್ಟಾರ್ ಕೆಜಿಫ್ 2 ಬಿಗ್ ಹಿಟ್ ನಂತರ ಒಂದು ಸುಮಾರಾಗಿರೋ ಸಿನಿಮಾ ಮಾಡಿದರೂ ಸಾವಿರ ಕೋಟಿಗಳಿಸುತ್ತೆ ಅನ್ನೋದು ಯಶ್ ಗಷ್ಟೇ ಅಲ್ಲಾ ಕಾಸು ಕೋಟ್ಟು ಸಿನಿಮಾ ನೋಡೊ ಪ್ರೇಕ್ಷಕನಿಗೂ ಗೊತ್ತು. ಆದರೆ ರಾಕಿ ಆ ಕೆಲಸ ಮಾಡಲಿಲ್ಲ. ಏಕೆಂದರೆ ಯಶ್​​ಗೆ ಹಣ ಗಳಿಸೋ ಉದ್ದೇಶ ಅಷ್ಟೇ ಅಲ್ಲಾ ಹಣದ ಜೊತೆ ಜನರು ಮರೆಯದಂತ ಹೆಸರನ್ನುಗಳಿಸ ಬೇಕು. ಕನ್ನಡ ಚಿತ್ರ ರಂಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸ ಬೇಕು ಅನ್ನೋ ಮಹದಾಸೆಯಿಂದ ರಾಕಿ ಇದು ವರೆಗೂ ಅತುರದಲ್ಲಿ ಸಿನಿಮಾ ಮಾಡದೆ ಎಚ್ಚರಿಕೆಯಿಂದ ತಮ್ಮ ಮುಂದಿನ ಸಿನಿಮಾ ಹೆಜ್ಜೆ ಇಡೋಕೆ ಸಜ್ಜಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)