Jawan-Shah Rukh Khan: ಜೋರಾಗಿದೆ 'ಜವಾನ್' ಫೀವರ್​! ಶಾರುಖ್ ಸಿನಿಮಾ ರಿಲೀಸ್​ಗೆ 21 ದಿನ ಇರುವಾಗಲೇ ಬುಕಿಂಗ್ ಓಪನ್

Arun Kumar
0

ದುಬೈ ಸೇರಿದಂತೆ ವಿದೇಶದ ಕೆಲವು ಕಡೆಗಳಲ್ಲಿ ‘ಜವಾನ್’ ಸಿನಿಮಾಗೆ ಬುಕಿಂಗ್ ಓಪನ್ ಆಗಿದ್ದು, ಶಾರುಖ್ ಅಭಿಮಾನಿಗಳು ಫುಲ್ ಖುಷ್​ ಆಗಿದ್ದಾರೆ.

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ (Shah Rukh Khan) ದೊಡ್ಡ ಆಕ್ಷನ್ ಎಂಟರ್ಟೈನರ್ ಜವಾನ್ (Jawan) ಸಿನಿಮಾ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ನಿರ್ದೇಶಕ ಅಟ್ಲಿ ನಿರ್ದೇಶನದ ಈ ಸಿನಿಮಾದಲ್ಲಿ ನಯನತಾರಾ (Nayanthara), ಪ್ರಿಯಾಮಣಿ (Priyamani) ಮತ್ತು ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಅವರ ಫೈಟ್ಸ್ ಅವರ ಅಭಿಮಾನಿಗಳ ಜೊತೆಗೆ ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುವುದು ಪಕ್ಕಾ ಎನ್ನುವ ಮಾತುಗಳು ಕೇಳಿ ಬರ್ತಿದೆ.  ಇದೀಗ ಜವಾನ್​ ಸಿನಿಮಾ ರಿಲೀಸ್​ಗೆ ಇನ್ನೂ 21 ದಿನ ಬಾಕಿ ಇದೆ. ಆಗಲೇ ಬುಕಿಂಗ್ ಓಪನ್ ಆಗಿದ್ದು ಅನೇಕರಿಗೆ ಅಚ್ಚರಿ ಮೂಡಿಸಿದೆ.


ಬಿಡುಗಡೆಗೂ ಮುನ್ನವೇ ಜೋರಾಯ್ತು ಜವಾನ್ ಹವಾ!


4 ವರ್ಷಗಳ ಬಳಿಕ ಪಠಾಣ್ ಸಿನಿಮಾ ಮೂಲಕ ಅಬ್ಬರಿಸಿದ ಶಾರುಖ್ ಖಾನ್​, ಮತ್ತೆ ನಾನೇ ಬಾಲಿವುಡ್ ಕಿಂಗ್ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಇದೀಗ ಶಾರುಖ್ ಜವಾನ್ ಸಿನಿಮಾ ಮೂಲಕ ಮತ್ತೆ ಕಮಾಲ್ ಮಾಡಲು ಮುಂದಾಗಿದ್ದಾರೆ. ಸೆಪ್ಟೆಂಬರ್ 7ರಂದು ಜವಾನ್ ಸಿನಿಮಾ ರಿಲೀಸ್ ಆಗ್ತಿದೆ. ಎಲ್ಲೆಡೆ ಜವಾನ್​ ಹವಾ ಜೋರಾಗಿದ್ದು, ಬುಕ್ಕಿಂಗ್ ಕೂಡ ಶುರುವಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)