ಧಾರವಾಡ: ಮಹಿಳೆಯ ವೇಷ ಧರಿಸಿ ಬಸ್ ನಿಲ್ದಾಣದಲ್ಲಿ ಓಡಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಾರ್ವಜನಿಕರು ಪತ್ತೆ ಹಚ್ಚಿ, ತೀವ್ರವಾಗಿ ತರಾಟೆಗೆತ್ತಿಕೊಂಡ ಘಟನೆ ಕುಂದಗೋಳ ತಾಲೂಕಿನ ಸಂಶಿ ಬಸ್ ನಿಲ್ದಾನದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಬಸ್ ನಿಲ್ದಾಣದಲ್ಲಿ ಬುರ್ಖಾ ಧರಿಸಿ ವ್ಯಕ್ತಿ ಕುಳಿತಿದ್ದು, ಮಹಿಳೆಯ ವೇಷದಂತೆ ಕಂಡು ಅನುಮಾನಗೊಂಡ ಸಾರ್ವಜನಿಕರು ಬುರ್ಖಾ ತೆಗೆಸಿದಾಗ, ಪುರುಷ ಮಹಿಳೆಯ ವೇಷ ಧರಿಸಿರುವುದು ಪತ್ತೆಯಾಗಿದೆ.
ವ್ಯಕ್ತಿಯನ್ನು ವಿಚಾರಿಸಿದಾಗ, ತಾನು ವೀರಭದ್ರಯ್ಯ ನಿಂಗಯ್ಯ ಮಠಪತಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಘೋಡಗೋರಿ ನಿವಾಸಿ ಎಂದು ಒಪ್ಪಿಕೊಂಡಿದ್ದು, ಬುರ್ಖಾ ಧರಿಸಿ ಮಹಿಳೆಯ ವೇಷದಲ್ಲಿ ಈತ ಭಿಕ್ಷೆ ಬೇಡುತ್ತಿರುವುದಾಗಿ ತಿಳಿಸಿದ್ದಾನೆನ್ನಲಾಗಿದೆ.
ಹೆಚ್ಚಿನ ಜನರು ಈತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇರುವ ಕಾರಣ ಮಹಿಳೆಯ ವೇಷ ಧರಿಸಿ ಬಂದಿದ್ದಾನೆ ಎಂದೇ ಭಾವಿಸಿದ್ದರು, ಆದ್ರೆ ಭಿಕ್ಷಾಟನೆಗೆ ಈ ವೇಷ ಧರಿಸಿರುವುದು ತಿಳಿಯುತ್ತಿದ್ದಂತೆಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು..
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.