ಆದಿವಾಸಿ ಯುವಕನ ಮೇಲೆ ಮೂತ್ರ ಮಾಡಿದ್ದ ಬಿಜೆಪಿ ಮುಖಂಡನ ಆಸ್ತಿ ನೆಲಸಮ: ವಿಕೃತ ಮನೋಭಾವಕ್ಕೆ ಸಿಕ್ತು ತಕ್ಕ ಶಿಕ್ಷೆ

Arun Kumar
0

ಆದಿವಾಸಿ ಯುವಕನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ಮುಖಂಡನ ಮಾಲಿಕತ್ವದಲ್ಲಿರುವ ಅಕ್ರಮ ಆಸ್ತಿಯ ಭಾಗಗಳನ್ನು ಮಧ್ಯಪ್ರದೇಶ ಸರ್ಕಾರವು ಇಂದು ನೆಲಸಮಗೊಳಿಸಿದೆ.

ಆದಿವಾಸಿ ಯುವಕನ ಮೇಲೆ ನಡೆಸಿದ ಅಮಾನುಷ ಕೃತ್ಯದಿಂದ ಆಡಳಿತರೂಢ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಹೀಗಾಗಿ ಕಠಿಣ ಕ್ರಮದ ಮೂಲಕ ಮುಜುಗರ ತಪ್ಪಿಸಲು ಪ್ರಯತ್ನಿಸಿದೆ.

ಸ್ಥಳೀಯ ಬಿಜೆಪಿ ಶಾಸಕನ ಆಪ್ತ ಪ್ರವೇಶ್ ಶುಕ್ಲಾ ಎಂಬಾತ ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿ ಬಿಜೆಪಿ ಹಾಗೂ ಆತನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಪ್ರಕರಣದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಪೊಲೀಸರು ಆರೋಪಿ ಶುಕ್ಲಾನನ್ನು ಬಂಧಿಸಿದ್ದರು.

ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ಜೆಸಿಬಿ ವಾಹನದೊಂದಿಗೆ ಹಲವಾರು ಅಧಿಕಾರಿಗಳು ಪರ್ವೇಶ್ ಶುಕ್ಲಾ ಮನೆಗೆ ತಲುಪಿದ್ದು ಅಕ್ರಮ ಒತ್ತುವರಿ ಆರೋಪದ ಮೇಲೆ ಆತನ ಆಸ್ತಿಯ ಭಾಗಗಳನ್ನು ಕೆಡವಿದ್ದಾರೆ.

ಈ ನಡುವೆ, ವೈರಲ್‌ ವಿಡಿಯೋ ನಕಲಿಯಾಗಿದೆ ಎಂದು ಹೇಳುವ ಪತ್ರಕ್ಕೆ ಬಲವಂತವಾಗಿ ಯುವಕನ ತಂದೆಯಿಂದ ಆರೋಪಿ ಸಹಿ ಮಾಡಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಪತ್ರ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಆರೋಪಿಯ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)