ಬ್ರೆಡ್ ಜಾಮ್ ಬಿಡಿ, ಆರೋಗ್ಯಕ್ಕೆ ಉತ್ತಮವಾದ ಮೊಳಕೆ ಕಾಳು ತಿನ್ನಿ

Arun Kumar
0

ಇತ್ತೀಚೆಗಿನ ದಿನಗಳಲ್ಲಿ ಜನರು ತಮ್ಮ ದೈನಂದಿನ ಒತ್ತಡದ ಬದುಕಿನಲ್ಲಿ ಬ್ರೆಡ್ ಜಾಮ್ ನಂತಹ ಅತ್ಯಂತ ಸುಲಭದ ಆಹಾರಗಳ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಇದು ಜನರಲ್ಲಿ ನಾನಾ ರೀತಿಯ ರೋಗಗಳಿಗೆ ಅಪೌಷ್ಠಿಕತೆಗೆ ಕಾರಣವಾಗುತ್ತಿದೆ.

ತರಕಾರಿಗಳು, ಕಾಳುಗಳನ್ನು ಜನ ಮರೆಯುತ್ತಿರುವುದರಿಂದಾಗಿ ಸಣ್ಣ ವಯಸ್ಸಿನಲ್ಲೇ ವೃದ್ಧರಿಗೆ ಬರುವಂತಹ ಕಾಯಿಲೆಗಳಿಗೆ ತುತ್ತಾಗುವಂತಹ ಸನ್ನಿವೇಶಗಳು ನಮ್ಮ ಸುತ್ತಮುತ್ತ ನೋಡಬಹುದಾಗಿದೆ. ಹಿಂದಿನ ಕಾಲದಲ್ಲಿ ನೆನೆಸಿಟ್ಟ ಕಾಳುಗಳನ್ನು ಸೇವನೆ ಮಾಡುವಂತಹ ಹವ್ಯಾಸ ಹೊಂದಿದ್ದ ಜನರು ಹೆಚ್ಚು ಕಾಲದ ವರೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು.

ಸಾಮಾನ್ಯವಾಗಿ ಜನರು ಚಳಿಗಾಲ ಬರುತ್ತಿದ್ದಂತೆಯೇ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.  ಅಂತಹ ಸಮಸ್ಯೆಗಳಿಗೆ ನೆನೆಸಿಟ್ಟ ಹೆಸರು ಕಾಳುಗಳು ಉತ್ತಮವಾಗಿದೆ. ನೆನೆಸಿಟ್ಟ ಕಾಳುಗಳು ನಮ್ಮ ದೇಹಕ್ಕೆ ಹೆಚ್ಚಿನ ರೋಗ ನಿರೋಧಕ ಸಾಮರ್ಥ್ಯವನ್ನು ನೀಡುತ್ತದೆ.

ಮೊಳಕೆ ಕಟ್ಟಿದ ಹೆಸರುಕಾಳನ್ನು ಸಲಾಡ್‌ ಗಳಲ್ಲಿ ಬೆರೆಸಿ ಬಳಸಬಹುದು. ಮೊಳಕೆಯೊಡೆದ ಹೆಸರುಕಾಳು ದೇಹದಲ್ಲಿರುವ ಹೆಚ್ಚುವರಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಪ್ರತಿದಿನ ಬೆಳಗ್ಗೆ ಮೊಳಕೆಯೊಡೆದ ಹೆಸರುಕಾಳು ಸೇವಿಸಿದರೆ ದೇಹದಲ್ಲಿನ ಅಗತ್ಯ ಪ್ರೋಟೀನ್ ಕೊರತೆಯನ್ನು ಅದು ನಿವಾರಿಸುತ್ತದೆ ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ.

ರಕ್ತದಲ್ಲಿ ಅಧಿಕ ಸಕ್ಕರೆಯ ಅಂಶ ಹೊಂದಿರುವವರಿಗೆ ಇದು ವರದಾನವಾಗಿದೆ. ಮಧುಮೇಹಿಗಳಿಗೆ ಉಂಟಾಗುವ ಮಲಬದ್ಧತೆಯ ಸಮಸ್ಯೆ ಹೆಸರುಕಾಳು ಸೇವನೆಯಿಂದ ದೂರವಾಗುತ್ತದೆ. ಅಧಿಕ ರಕ್ತದೊತ್ತಡವನ್ನು ಸಹ ಇದು ಕಡಿಮೆ ಮಾಡುತ್ತದೆ. ಮೊಳಕೆ ಬರಿಸಿದ ಹೆಸರುಕಾಳನ್ನು ಸೇವಿಸುವುದರಿಂದ ದಿನವಿಡೀ ನಿಮ್ಮ ದೇಹದಲ್ಲಿ ಶಕ್ತಿ, ಚೈತನ್ಯ ತುಂಬಿರುತ್ತದೆ. ಸ್ನಾಯು ಚೇತರಿಕೆ ವೇಗವಾಗಿರುತ್ತದೆ. ಇದು ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ನಿವಾರಿಸುತ್ತದೆ. ಮೊಳಕೆ ಬರಿಸಿದ ಹೆಸರು ಕಾಳು ತಿನ್ನುವುದರಿಂದ ರಕ್ತಹೀನತೆ ಉಂಟಾಗುವುದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)