ಬೆಂಗಳೂರು: ಆನ್–ಲೈನ್ ಬೆಟ್ಟಿಂಗ್ ಗಾಗಿ ತನ್ನ ಮನೆಯಲ್ಲಿರುವ ಚಿನ್ನ, ಬೆಳ್ಳಿ, ನಗದು ಹಾಗೂ ವಾಚ್ ಕಳ್ಳತನ ಮಾಡಿದ್ದ, ಆರೋಪಿಯ ಬಂಧನವಾಗಿದೆ.
ಬೆಂಗಳೂರು ನಗರ, ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ, ಜಯನಗರ |ನೇ ಬ್ಲಾಕ್ ದೂರುದಾರನ ತಮ್ಮನೇ ಆರೋಪಿಯಾಗಿದ್ದಾನೆ.
ಆನ್–ಲೈನ್ ಬೆಟ್ಟಿಂಗ್ ಗಾಗಿ ಮನೆಯಲ್ಲಿ ಯಾರೂ ಇಲ್ಲದೆ ಇರುವುದನ್ನು ಗಮನಿಸಿ, ರೂಂ ನಲ್ಲಿನ ಕಬೋರ್ಡ್‌ನಲ್ಲಿ ಇಟ್ಟಿದ್ದ ಚಿನ್ನ, ಬೆಳ್ಳಿ, ನಗದು ಹಾಗೂ ವಾಚ್ ಕಳ್ಳತನವಾಗಿತ್ತು. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ಕಾರ್ಯಪ್ರವೃತ್ತಾರಾದ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನಿಂದ 78.3 ಗ್ರಾಂ ಚಿನ್ನದ ಒಡವೆಗಳು, 288,101 eg ಬೆಳ್ಳಿಯ ಒಡವೆಗಳು, ಮತ್ತು ಒಂದುಲಾಂಗಿನ್ಸ್ ಮೆನ್ಸ್ ವಾಚ್‌ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ–ಪೊಲೀಸ್ ಆಯುಕ್ತರಾದ ಪಿ.ಕೃಷ್ಣಕಾಂತ್ ಮತ್ತು ಜಯನಗರ ಉಪ ವಿಭಾದ ಸಹಾಯಕ ಕಮೀಷನರ್ ಕೆ.ವಿ.ಶ್ರೀನಿವಾಸ್ ರವರುಗಳ ಮಾರ್ಗದರ್ಶನದಲ್ಲಿ, ಸಿದ್ದಾಪುರ ಪೊಲೀಸ್ ರಾಣಯ ಪೊಲೀಸ್ ಇನ್ಸ್‌ಪೆಕ್ಟರ್ ಹನುಮಂತ ಕೆ ಭಜಂತ್ರಿ ಹಾಗೂ ಸಿಬ್ಬಂದಿರವರುಗಳ ಕಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.