- ಉದ್ದಿನ ಬೇಳೆ – ಎರಡೂವರೆ ಚಮಚ
- ಕೆಂಪು ಮೆಣಸಿನಕಾಯಿ – 5
- ಕಾಳುಮೆಣಸು – 1 ಚಮಚ
- ಕಡಲೆ ಬೇಳೆ – ಅರ್ಧ ಚಮಚ
- ಜೀರಿಗೆ – ಕಾಲು ಚಮಚ
- ಸಾಸಿವೆ – ಕಾಲು ಚಮಚ
- ಹಿಂಗ್ – ಕಾಲು ಚಮಚ
- ಈರುಳ್ಳಿ – 2 (ಸಣ್ಣಗೆ ಕತ್ತರಿಸಿದ್ದು)
- ಕರಿಬೇವಿನ ಎಲೆ – ಸ್ವಲ್ಪ
- ಬೇಯಿಸಿದ ಎಳೆಯ ಆಲೂಗಡ್ಡೆ – 15 ರಿಂದ 20
- ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
- ಮೊದಲಿಗೆ ಬಾಣಲೆಯಲ್ಲಿ 2 ಚಮಚ ಉದ್ದಿನ ಬೇಳೆ, ಒಣ ಕೆಂಪು ಮೆಣಸಿನಕಾಯಿ, ಕಾಳು ಮೆಣಸನ್ನು ಹಾಕಿ ಹುರಿದುಕೊಳ್ಳಿ.
- ಬಳಿಕ ಅದನ್ನು ತಣ್ಣಗಾಗಿಸಿ, ಮಿಕ್ಸಿ ಜಾರ್‌ಗೆ ಹಾಕಿ ಪುಡಿಮಾಡಿಕೊಳ್ಳಿ.
- ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಕಡಲೆ ಬೇಳೆ, ಉಳಿದ ಅರ್ಧ ಚಮಚ ಉದ್ದಿನ ಬೇಳೆ, ಜೀರಿಗೆ, ಸಾಸಿವೆ ಹಾಗೂ ಹಿಂಗು ಹಾಕಿ ಸಿಡಿಸಿ.
- ಬಳಿಕ ಈರುಳ್ಳಿ ಹಾಕಿ ಮೃದುವಾಗುವವರೆಗೆ ಹುರಿದುಕೊಳ್ಳಿ. ನಂತರ ಕರಿಬೇವಿನ ಸೊಪ್ಪು ಸೇರಿಸಿ.
- ಈಗ ಬೇಯಿಸಿದ ಎಳೆಯ ಆಲೂಗಡ್ಡೆಯನ್ನು ಹಾಕಿ ಮಿಶ್ರಣ ಮಾಡಿ.
- ಪುಡಿ ಮಾಡಿದ ಮಸಾಲೆ ಹಾಗೂ ಉಪ್ಪು ಸೇರಿಸಿ, ಮಿಶ್ರಣ ಮಾಡಿ, ಕೆಲ ನಿಮಿಷ ಬೇಯಿಸಿಕೊಳ್ಳಿ. ಇದೀಗ ಆಲೂಗಡ್ಡೆ ಫ್ರೈ ಸವಿಯಲು ಸಿದ್ಧ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.