ಸದ್ಯ ಸಾಮಾಜಿಕ ಜಾಲತಾಣದಲ್ಲಿ ದಿಗ್ಗಜ ಆಗಿರುವ ಟ್ವಿಟರ್‌ಗೆ ಸ್ಪರ್ಧೆ ನೀಡಲು ಫೇಸ್‌ಬುಕ್ ಒಡೆತನದ ಮೆಟಾ ಸಜ್ಜಾಗುತ್ತಿದೆ. ಯಾಕೆಂದರೆ ಟ್ವಿಟರ್ ರೀತಿಯ ಮೈಕ್ರೋ ಬ್ಲಾಗಿಂಗ್ ಅಪ್ಲಿಕೇಶನ್ ಅನ್ನು ಪರಿಯಿಸುವುದಾಗಿ ಮೆಟಾ ಹೇಳಿದೆ.
ಟ್ವಿಟರ್ ಬಳಕೆದಾರರಿಗೆ ಸಾಲು ಸಾಲು ಷರತ್ತುಗಳನ್ನು ಟ್ವಿಟರ್ ವಿಧಿಸುತ್ತಿರುವುದರಿಂದ್ದ ಮೆಟಾ ಘೋಷಿಸಿದ ಹೊಸ ಆ್ಯಪ್ ಮೇಲೆ ನೆಟ್ಟಿಗರ ಗಮನ ಹೋಗಿದೆ.
ಮೆಟಾದ ಹೊಸ ಆ್ಯಪ್‌ಗೆ ‘ಥ್ರೆಡ್ಸ್ʼ ಎಂದು ಹೆಸರಿಟ್ಟಿದ್ದು, ಶೀಘ್ರದಲ್ಲೇ ಬಳಕೆಗೆ ಲಭ್ಯವಾಗಲಿದೆ.
ಇನ್ಸ್ಟಾಗ್ರಾಮ್ ಆಧಾರಿತ ಆ್ಯಪ್ ಇದಾಗಿರಲಿದ್ದು, ಇನ್ಸ್ಟಾಗ್ರಾಮ್ ಯೂಸರ್ ನೇಮ್ ಹಾಗೂ ಐಡಿಯನ್ನೇ ಹೊಸ ಆ್ಯಪ್ ನಲ್ಲಿ ಬಳಸಬಹುದು ಎಂದು ಮೆಟಾ ಮೂಲಗಳು ಹೇಳಿವೆ.
ಆ್ಯಪಲ್ ಸ್ಟೋರ್ ನಲ್ಲಿ ಆ್ಯಪ್ ಮೊದಲು ಲಭ್ಯವಾಗಲಿದ್ದು, ಗೂಗಲ್ ಸ್ಟೋರ್ ನಲ್ಲೂ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಣೆ ಮಾಡಲಾಗುತ್ತದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.