ವೃದ್ದೆಯ ಮೇಲೆ ಚಿರತೆಯೊಂದು ದಾಳಿ ಮಾಡಿದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ದುಧ್ವಾ ಬಫರ್ ವಲಯದ ಧೌರಾಹ್ರಾ ಅರಣ್ಯ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ರಾಮನಗರ ಬಾಘಾ ಗ್ರಾಮದ ನಿವಾಸಿ ರಾಮಕಾಲಿ, ಚಿರತೆ ದಾಳಿಗೆ ಬಲಿಯಾದ ವೃದ್ದೆ.
ದಾಳಿಯ ಕ್ರೂರತೆ ಎಷ್ಟಿತ್ತೆಂದರೆ ವೃದ್ದೆಯ ರುಂಡ, ಮುಂಡ ಬೇರೆಯಾಗಿದೆ. ಮುಖವನ್ನು ಚಿರತೆ ತಿಂದು ಹಾಕಿದೆ.
ಧೌರಾಹ್ರಾ ಅರಣ್ಯ ಪ್ರದೇಶದಲ್ಲಿ ಈ ಮಧ್ಯೆ ಚಿರತೆಗಳ ಓಡಾಟ ಹೆಚ್ಚಾಗಿದ್ದು, ಕೆಲವು ದಿನಗಳ ಜನರು ಎಚ್ಚರದಿಂದ ಇರಲು ಅಲ್ಲಿನ ಅಧಿಕಾರಿಗಳು ಸೂಚಿಸಿದ್ದಾರೆ.
ಜಮೀನಿನ ಕೆಲಸ ಮುಗಿಸಿಕೊಂಡು ಬಂದ ವೃದ್ಧೆ ರಾಮಕಾಲಿ ಅಲ್ಲಿಯೇ ಇದ್ದ ಗುಡಿಸಲಿನಲ್ಲಿ ಮಲಗಿದ್ದಾಗ ಚಿರತೆ ದಾಳಿ ಮಾಡಿದ್ದು, ಕುತ್ತಿಗೆಯನ್ನು ಬಾಯಿಯಿಂದ ಹಿಡಿದುಕೊಂಡಿದೆ. ಇದರಿಂದ ಮಹಿಳೆ ಒದ್ದಾಡಿದ್ದು, ಪಕ್ಕದಲ್ಲಿದ್ದ ಪುತ್ರ ಇದನ್ನು ಕಂಡು ಸಹಾಯಕ್ಕಾಗಿ ಕೂಗಿದ್ದಾನೆ. ನೆರೆಹೊರೆಯವರ ಸಹಾಯದಿಂದ ಚಿರತೆಯನ್ನು ಕಾಡಿಗೆ ಓಡಿಸಿದ್ದಾರೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.