ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿ ಅಜಿತ್ ಪವಾರ್
ಅವರು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಕ್ಷವನ್ನು ಮುನ್ನಡೆಸಲು ಅವರಿಗೆ ವಯಸ್ಸಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶರದ್ ಪವಾರ್ ಕೆಲವು ದಿನಗಳ ನಂತರ ಮನಸ್ಸು ಬದಲಾಯಿಸಿದ್ದರು. ಇದಕ್ಕೆ ಕಾರಣವೇನು ಎಂದು ಅಜಿತ್ ಪವಾರ್ ಪ್ರಶ್ನೆ ಮಾಡಿದ್ದಾರೆ.
ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ‘2014 ರ ಚುನಾವಣೆಯ ನಂತರ ಸರ್ಕಾರ ರಚಿಸಲು ಎನ್‌ಸಿಪಿ ಬಿಜೆಪಿಯನ್ನು ಏಕೆ ಬೆಂಬಲಿಸಿತು..? ಎಂದು ಹಿರಿಯ ಎನ್‌ಸಿಪಿ ನಾಯಕನನ್ನು ಗುರಿಯಾಗಿಸಿಕೊಂಡು ಅಜಿತ್ ಪ್ರಶ್ನಿಸಿದ್ದಾರೆ.
‘ಶರದ್ ಪವಾರ್ ಈಗಾಗಲೇ 83 ವರ್ಷ ವಯಸ್ಸಾಗಿದೆ. ಬಿಜೆಪಿಯಲ್ಲಿ ನಾಯಕರು 75 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ. ನೀವು ಶತಾಯುಷಿ. ನೀವು ನಮ್ಮ ದೇವತೆ. ನಮಗೆ ಆಶೀರ್ವಾದ ನೀಡಿ’ ಎಂದು ಶರದ್ ಅವರನ್ನು ಉದ್ದೇಶಿಸಿ ಅಜಿತ್ ಹೇಳಿದ್ದಾರೆ.
ನೀವು ನಿರ್ಧಾರವನ್ನು ಹಿಂತೆಗೆದುಕೊಳ್ಳುವುದಾದರೆ ಏಕೆ ರಾಜೀನಾಮೆ ನೀಡಿದ್ದಿರಿ..? ನಾನು ನನ್ನ ಸಹೋದರಿ ಸುಪ್ರಿಯಾ ಸುಳೆ ಬಳಿಯೂ ಶರದ್ ಗೆ ವಿವರಿಸಲು ಹೇಳಿದ್ದೆ. ಆದರೆ ಶರದ್ ತುಂಬಾ ಹಠಮಾರಿ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಪಕ್ಷದ ಹೆಸರು ಮತ್ತು ಗುರಿ ನಮ್ಮದಾಗಿಯೇ ಉಳಿಯುತ್ತದೆ. ನಮ್ಮ ಪಕ್ಷವನ್ನು ಮತ್ತೊಮ್ಮೆ ರಾಷ್ಟ್ರೀಯ ಪಕ್ಷವನ್ನಾಗಿ ಮಾಡಬೇಕು ಎಂದು ಶಾಸಕರ ಸಮ್ಮುಖದಲ್ಲಿ ಅಜಿತ್ ಪವಾರ್ ಹೇಳಿದ್ದಾರೆ.
2004ರಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ ಕಡಿಮೆ ಇದ್ದಾಗಲೂ ಅವರಿಗೇ ಸಿಎಂ ಹುದ್ದೆ ನೀಡಲಾಗಿತ್ತು. ನಮ್ಮನ್ನ ಸಿಎಂ ಮಾಡಿದ್ದರೆ ರಾಜ್ಯದಲ್ಲಿ ಇಲ್ಲಿಯವರೆಗೆ ಎನ್‌ಸಿಪಿಯಿಂದ ಮಾತ್ರ ಮುಖ್ಯಮಂತ್ರಿ ಇರುತ್ತಿದ್ದರು. ಮಹಾರಾಷ್ಟ್ರದಲ್ಲಿ ಕೆಲವು ಯೋಜನೆಗಳನ್ನು ಜಾರಿಗೊಳಿಸಲು ನಾನು ಮುಖ್ಯಮಂತ್ರಿಯಾಗಲು ಬಯಸುತ್ತೇನೆ. ನಮ್ಮ ಯಾವುದೇ ಕಾರ್ಯಕರ್ತರನ್ನು ನಾವು ಹೋಗಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.ಪ್ರಸ್ತುತ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ಬಿಜೆಪಿ ಆಡಳಿತವಿದೆ. ಅವರು 2024 ರಲ್ಲೂ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ ಎಂದು ಅಜಿತ್ ಹೇಳಿದ್ದಾರೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.