ಕರ್ನಾಟಕದ ಸರ್ಕಾರಿ ಶಾಲೆಗಳಲ್ಲೇ ಮೊಟ್ಟ ಮೊದಲ ಬಾರಿಗೆ ಉಚಿತ SUMMER CAMP ಮಾಡಿದ ಶಾಲೆ ಇದಾಗಿದೆ

Arun Kumar
1


ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೇವಿನಮರ ಕಾಲೋನಿ
2004 ರಲ್ಲಿ ಪ್ರಾರಂಭವಾಯಿತು.ಒಂದರಿಂದ ಐದನೇ ತರಗತಿಯವರೆಗೆ ಇರುವ ಶಾಲೆ ಇದು. ಅಂದು ಕೆಲವೇ ಮಕ್ಕಳಿದ್ದ ಶಾಲೆ ಇಂದು115 ಮಕ್ಕಳಿಂದ ಕೂಡಿದೆ..
2010ರಲ್ಲಿಯೇ ಪ್ರೊಜಕ್ಟರ್ ಮತ್ತು ಲ್ಯಾಪ್‌ಟಾಪ್ ಮೂಲಕ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಿದ ಜಿಲ್ಲೆಯ ಪ್ರಥಮ ಸರ್ಕಾರಿ ಶಾಲೆ ಇದಾಗಿದೆ. ಈ ಸಲ ವಿಶೇಷವಾಗಿ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಮಾಡಲಾಯಿತು. ಇದಕ್ಕಾಗಿ ಇಂದ್ರಧನುಷ್ ತಂಡದವರು ತುಂಬಾ ಸಹಕಾರ ನೀಡಿದರು . ಶಿಬಿರದಲ್ಲಿ ಮಕ್ಕಳಿಗೆ ಯೋಗ,ಧ್ಯಾನ,ಕ್ರೀಡೆ, ಕಲೆ,ಸಂಗೀತ, ಚಿತ್ರಕಲೆ, ನೃತ್ಯ ಇತ್ಯಾದಿಗಳನ್ನು ಹೇಳಿಕೊಡಲಾಯಿತು (ಎಲ್ಲವೂ ಖಚಿತವಾಗಿ) ಅಲ್ಲದೆ ಮಕ್ಕಳಿಗೆ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಸಹ ಇಂದ್ರ ಧನುಷ್ ತಂಡದವರ ಮಾಡಿಕೊಟ್ಟರು. ಈ ತಂಡದವರು ಮಕ್ಕಳಿಗಾಗಿ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು, ಕಂಪ್ಯೂಟರ್ ತರಗತಿಗಳನ್ನು ಮಾಡುತ್ತಿದ್ದಾರೆ. ಇಲಾಖೆ ವತಿಯಿಂದ ಶಾಲೆಯಲ್ಲಿ ಕೇವಲ ಇಬ್ಬರು ಶಿಕ್ಷಕರಿದ್ದು ಗುಣಮಟ್ಟದ ಶಿಕ್ಷಣ ನೀಡಲು ಕಷ್ಟಸಾಧ್ಯವಾದ ಕಾರಣ ಸ್ವಯಂ ಸೇವಕ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಇದಕ್ಕೆ ಪಂಚಾಯತಿ ಮತ್ತು ಇಂದ್ರ ಧನುಷ್ ತಂಡದವರು ಸಹಕಾರ ನೀಡಿದ್ದಾರೆ. ಮಕ್ಕಳಲ್ಲಿ ಸೃಜನಶೀಲತೆಯನ್ನು ಉತ್ತಮ ಪಡಿಸುವ ಸಲುವಾಗಿ ವಿಜ್ಞಾನ ದಿನ, ಕ್ರೀಡಾ ದಿನ,ಪರಿಸರ ದಿನ, ಕಲಾ ದಿನ, ಹೀಗೆ ಹತ್ತು ಹಲವು ಚಟುವಟಿಕಾ ದಿನಗಳನ್ನು ಮಾಡಲಾಗುತ್ತಿದೆ. ಮುಂದಿನ ವರ್ಷದಿಂದ ಮಕ್ಕಳಿಗಾಗಿ ಬಸ್ ವ್ಯವಸ್ಥೆ ಮಾಡವ ತಯಾರಿ ನಡೆಸಲಾಗಿದೆ ಏಕೆಂದರೆ ನಮ್ಮ ಶಾಲೆಯ ಶಿಕ್ಷಣದ ಗುಣಮಟ್ಟವನ್ನು ಮೆಚ್ಷಿದ ನೆರೆಹೊರೆಯ ಹಳ್ಳಿಯ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ದಾಖಲು ಮಾಡಲು ಮುಂದಾಗಿದ್ದಾರೆ. ಅಲ್ಲದೇ ಕೇಲವು ಪೋಷಕರಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ತೆಗೆದು ಈ ಶಾಲೆಗೆ ಸೇರಿಸಲು ಬಯಸಿದ್ದಾರೆ ಹಾಗಾಗಿ ಆ ಮಕ್ಕಳು ಶಾಲೆಗೆ ಬಂದು ಹೋಗಲು ಅನುಕೂಲವಾಗಲೆಂದು ಬಸ್ ವ್ಯವಸ್ಥೆಗೆ ಯೋಜನೆ ಮಾಡಲಾಯಿತು. ಮಕ್ಕಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಅಗತ್ಯ ಇರುವ ಕೊಠಡಿಗಳನ್ನು ಕಟ್ಟಲು ಕೇವಲ ಕಂಪನಿಗಳ ಜೋತೆ ಮಾತಾನಾಡಲಾಗಿದೆ. ಅಲ್ಲದೇ ತಾಲ್ಲೂಕು ಪಂಚಾಯತಯವರು ಸಹ ಎರಡು ಕೊಠಡಿಗಳನ್ನು ಕಟ್ಟಿ ಕೊಡಲು ಒಪ್ಪಿದ್ದಾರೆ. ಮಕ್ಕಳಲ್ಲಿ ಕ್ರೀಡಾ ಆಸಕ್ತಿ ಹೆಚ್ಚಿಸಲು ಈ ಬಾರಿ ಕ್ರೀಡೆಗಾಗಿಯೆ ಕೋಚ್ಅನ್ನು ಸಹ ನೇಮಕ ಮಾಡಲಾಗಿದೆ. ಈ ಎಲ್ಲಾ ಉತ್ತಮ ಬೆಳವಣಿಗೆಗೆ ಹಾಗೂ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ಪಂಚಾಯತ್ ನವರಿಗೂ , ರೋಟರಿ ಕ್ಲಬ್ ನವರಿಗೂ, ದಾನಿಗಳಿಗೂ , ಪೋಷಕ ವರ್ಗದವರಿಗೂ ಹಾಗೂ ಮುಖ್ಯವಾಗಿ ಇಂಧ್ರ ಧನುಷ್ ತಂಡದವರಿಗೂ ಅನಂತ ಅನಂತ ಧನ್ಯವಾದಗಳು.

ಇನ್ನೂ ಮುಂದುವರೆದು ಈ ಬಾರಿ ಬೇವಿನಮರಕಾಲೋನಿಯಲ್ಲಿ ಹತ್ತನೆ ಹಾಗೂ ಪಿ ಯು ಸಿ ಓದುತ್ತಿರುವ ವಿಧ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣವನ್ನು ನಮ್ಮ ಶಾಲೆಯಲ್ಲಿ ನೀಡಲು ಯೋಜನೆ ಮಾಡಲಾಗಿದೆ. ಗ್ರಾಮದ ನಿರುದ್ಯೋಗ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುವ ಯೋಜನೆಯನ್ನು ಸಹ ಮಾಡಲಾಗಿದೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

1ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ