Skip to content
BREAKING

ನ್ಯಾಯ ಕೇಳಲು ಬಂದವರಿಗೆ ಇನ್‌ಸ್ಪೆಕ್ಟರ್ ಅವಾಜ್: ‘ಗ್ರಹಚಾರ ಬಿಡಿಸುತ್ತೇನೆ’ ಎಂದ ಆರೋಪ

ರಸ್ತೆ ಒತ್ತುವರಿ ಬಗ್ಗೆ ದೂರು ನೀಡಲು ಬಂದ ಸಾರ್ವಜನಿಕರ ಜೊತೆ ಇನ್‌ಸ್ಪೆಕ್ಟರ್ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ

🎬 VNK Team
Key Points
  • ನ್ಯಾಯ ಕೇಳಲು ಪೊಲೀಸ್ ಠಾಣೆಗೆ ತೆರಳಿದ್ದ ಸಾರ್ವಜನಿಕರ ಜೊತೆ ಇನ್‌ಸ್ಪೆಕ್ಟರ್ ಅನುಚಿತವಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ದೊಡ್ಡಬಳ್ಳಾಪುರ: ಅಲ್ಲ ಪೊಲೀಸರು ಸ್ವಲ್ಪ ಯೋಚಿಸಿ ಪ್ರತಿಕ್ರಿಯೆ ನೀಡಿದ್ದರೆ ಚೆನ್ನಾಗಿ ಇರ್ತಿತ್ತು, ಜನರು ಕಷ್ಟ ಅಂತ ಬಂದ್ರೆ ಅದನ್ನ ಆಲಿಸಬೇಕು ಅದು ಪೊಲೀಸರ ಮುಖ್ಯ ಕರ್ತವ್ಯ ಆದರೆ ಇಲ್ಲಿ ನಡೆದಿದ್ದು ಸ್ವಲ್ಪ ನೋವು ಅಗುವ ವಿಷಯ, ಸಮಸ್ಯೆ ಕೇಳಿದ್ರೆ ಪೊಲೀಸರ ಬಾಯಲ್ಲಿ ಬರೋದು ಗ್ರಹಚಾರ ಬಿಡಿಸ್ತೀನಿ ಅನ್ನೋ ಪಾದನಾ?

ರಸ್ತೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ದೂರು ನೀಡಿ ನ್ಯಾಯ ಕೇಳಲು ತೆರಳಿದ್ದ ಸಾರ್ವಜನಿಕರ ಜೊತೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಎಂ.ಬಿ. ನವೀನ್ ಕುಮಾರ್ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗೆಜ್ಜಗದಹಳ್ಳಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ರಸ್ತೆ ಒತ್ತುವರಿ ಸಮಸ್ಯೆ ಬಗ್ಗೆ ದೂರು ನೀಡಲು ಬಂದಿದ್ದ ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತರಲು ಮುಂದಾಗಿದ್ದರು. ಈ ವೇಳೆ ಇನ್‌ಸ್ಪೆಕ್ಟರ್ ಸಾರ್ವಜನಿಕರ ಜೊತೆ ಏಕವಚನದಲ್ಲಿ ಮಾತನಾಡಿ ಗದರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಲ್ಲದೆ, “ಮೀಡಿಯಾ ಇದೆ ಅಂತ ಪೋಸ್ ಕೊಟ್ಟರೆ ಗ್ರಹಚಾರ ಬಿಡಿಸುತ್ತೇನೆ” ಹಾಗೂ “ಈಡಿಯಟ್ಸ್” ಎಂಬ ಪದಗಳನ್ನು ಬಳಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈ ಮಾತುಕತೆಯ ವೇಳೆ ಅಲ್ಲಿದ್ದ ಕೆಲವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಸಾರ್ವಜನಿಕರೊಂದಿಗೆ ಈ ರೀತಿಯಾಗಿ ಮಾತನಾಡಿರುವುದು ಸರಿಯಲ್ಲ ಎಂಬ ಆಕ್ಷೇಪವೂ ಕೇಳಿಬಂದಿದೆ.

ರಸ್ತೆ ಒತ್ತುವರಿ ಸಮಸ್ಯೆ ಬಗ್ಗೆ ದೂರು ನೀಡಲು ಬಂದವರಿಗೆ ಅವರ ಅಹವಾಲು ಆಲಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳುವ ಬದಲು ಗದರಿಸಲಾಗಿದೆ ಎಂಬ ಆರೋಪದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇನ್‌ಸ್ಪೆಕ್ಟರ್ ಎಂ.ಬಿ. ನವೀನ್ ಕುಮಾರ್ ಅವರ ಅಧಿಕೃತ ಪ್ರತಿಕ್ರಿಯೆ ಲಭ್ಯವಾದಲ್ಲಿ ಅದನ್ನೂ ವರದಿಯಲ್ಲಿ ಸೇರಿಸಲಾಗುವುದು.

ಪೊಲೀಸರ ಪ್ರತಿಕ್ರಿಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ, ಹಾಗಾದ್ರೆ ಈ ಪ್ರಕರಣ ಇನ್ಯಾವ ಹಂತಕ್ಕೆ ತಲುಪುತ್ತದೆ ಎಂದು ಕಾದು ನೋಡಬೇಕು.

#ದೊಡ್ಡಬಳ್ಳಾಪುರ ಸುದ್ದಿ#ಎಂ ಬಿ ನವೀನ್ ಕುಮಾರ್#ಪೊಲೀಸ್ ಇನ್‌ಸ್ಪೆಕ್ಟರ್#ಗೆಜ್ಜಗದಹಳ್ಳಿ#ರಸ್ತೆ ಒತ್ತುವರಿ#ಬೆಂಗಳೂರು ಗ್ರಾಮಾಂತರ#ಕರ್ನಾಟಕ ಪೊಲೀಸ್
ShareXFacebook

Comments

Comments are reviewed by our desk before they appear. Sign in with your mobile number to join the discussion.